ಶಿವಮೊಗ್ಗ: ರಾಜ್ಯದಲ್ಲಿ ಆ ಗ್ಯಾಂಗ್ ತುಂಬಾನೇ ಆ್ಯಕ್ಟೀವ್ ಆಗಿದೆ ಎನ್ನಲಾಗುತ್ತಿದೆ. ಅಲ್ಲಲ್ಲಿ ಕ್ರೈ ಕೇಸ್ ದಾಖಲಾಗುತ್ತಿದ್ದಂತೇ ಪೊಲೀಸರು ಅಷ್ಟೇ ತ್ವರಿತವಾಗಿ ಆರೋಪಿಗಳ ಪತ್ತೆಯ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಆ ಗ್ಯಾಂಗ್ ಕೃತ್ಯವೆಸಗುವುದು ನಿಂತಿಲ್ಲ. ಸೋ ಸಾರ್ವಜನಿಕರು ಆ ಗ್ಯಾಂಗ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮೈಮರೆತ್ರೆ ಆಭರಣಗಳನ್ನು ಕದ್ದೊಯ್ಯುತ್ತಾರೆ ಎಂಬುದಾಗಿ ಸಾರ್ವಜನಿಕರಿಗೆ ಎಎಸ್ಪಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೇ ಆ ಗ್ಯಾಂಗ್ ಯಾವುದು? ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ಪೇಟೆ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮಾಹಿತಿಯನ್ನು ಸಹಾಯಕ ಪೊಲೀಸ್ ಅಧೀಕ್ಷಕರಾದಂತ ಡಾ.ಬೆನಕ ಪ್ರಸಾದ್ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವಂತ ಗ್ಯಾಂಗ್ ಅಂದ್ರೆ ಅದು ‘ಇರಾನಿ ಗ್ಯಾಂಗ್’ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಈ ಇರಾನಿ ಗ್ಯಾಂಗ್ ಅಪರಾಧ ಕೃತ್ಯಗಳನ್ನು ಎಸಗುತ್ತಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು.
ಇರಾನಿ ಗ್ಯಾಂಗ್ ಸಾರ್ವಜನಿಕರನ್ನು ಪೊಲೀಸರೆಂದು ನಂಬಿಸುತ್ತದೆ. ಮೈತುಂಬಾ ಒಡವೆ ಹಾಕಿಕೊಂಡು ಹೋಗುತ್ತಿರುವವರ ಬಳಿಯಲ್ಲಿ ತಾವು ಪೊಲೀಸರು, ಇಲ್ಲಿ ಕಳ್ಳರ ಕಾಟ ಹೆಚ್ಚಿದೆ. ನಿಮ್ಮ ಆಭರಣಗಳನ್ನು ಬಿಚ್ಚಿ, ಒಳಗಿಟ್ಟುಕೊಂಡು ಹೋಗಿ ಎಂಬುದಾಗಿ ಸೂಚಿಸುತ್ತದೆ. ಅವರ ಮಾತು ನಂಬಿ ಆಭರಣ ಬಿಚ್ಚಿ, ಬಟ್ಟೆಯಲ್ಲೋ, ಬೇರಾವುದರಲ್ಲೋ ಇಟ್ಟುಕೊಡಲು ಗ್ಯಾಂಗ್ ಮುಂದಾಗುತ್ತದೆ. ನೀವು ಆಭರಣ ಬಿಚ್ಚಿ, ಅವರಿಗೆ ನೀಡಿ, ಅವರಿಂದ ಕಟ್ಟಿಕೊಟ್ಟ ಗಂಟು ಪಡೆದರೇ ಅದರಲ್ಲಿ ಆಭರಣಗಳಿರೋದಿಲ್ಲ. ಬೇರೇನೋ ಇರಿಸಲಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಯಾವುದೇ ವ್ಯಕ್ತಿ ತಾವು ಪೊಲೀಸರೆಂದೋ, ಬೇರೆ ಯಾವುದೋ ಅಧಿಕಾರಿಯೆಂದೋ ನಿಮ್ಮನ್ನು ಪರಿಚಯಿಸಿಕೊಂಡು, ಆಭರಣದಗಳ ಬಗ್ಗೆ ವಿಚಾರಿಸಿದೇ ಕೂಡಲೇ 112ಗೆ ಕರೆ ಮಾಡಿ ಎಂದು ಹೇಳಿದರು.
ಕೃತ್ಯ ನಡೆದಾದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಕೃತ್ಯ ನಡೆಯದಂತೆ ತಡೆಯುವುದು ಬಹುಮುಖ್ಯವಾಗಿದೆ. ಸಾರ್ವಜನಿಕರು ಇರಾನಿ ಗ್ಯಾಂಗ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ, ಖಾಸಗಿಯಾಗಿ ಓಡಾಡುವಂತ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಆಭರಣಗಳನ್ನು ಧರಿಸಬಾರದು. ಮಿತವಾಗಿ, ಸುರಕ್ಷಿತ ರೀತಿಯಲ್ಲಿ ಧರಿಸಿ. ಪೊಲೀಸ್ ಇಲಾಖೆ ನಿಮ್ಮೊಂದಿಗೆ ಸದಾ ಇರುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿಯೂ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಇರಾನಿ ಗ್ಯಾಂಗ್ ಒಂದೇ ಕಡೆಯಲ್ಲಿ ಸ್ಥಿರವಾಗಿ ಕೃತ್ಯವೆಸಗುವುದಿಲ್ಲ. ಅದು ಒಂದು ಕಡೆಯಿಂದ ಆರಂಭಿಸಿ ಮತ್ತೊಂದು ಕಡೆಗೆ ಸಂಚರಿಸುತ್ತಲೇ ಇರುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯನ್ನು ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೇ 112ಗೆ ಕರೆ ಮಾಡಿ. ಪೊಲೀಸರೊಂದಿಗೆ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಕೈಜೋಡಿಸುವಂತೆ ಮನವಿ ಮಾಡಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಒಡವೆ ಕದ್ದ ಆರೋಪಿ 24 ಗಂಟೆಯಲ್ಲೇ ಅರೆಸ್ಟ್
BREAKING: ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ‘ಹೆಚ್.ಕೆ ನಾಗಪ್ಪ’ ರಾಜೀನಾಮೆ: ಡಿಸಿಗೆ ಪತ್ರ
BIG NEWS: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ವಿರುದ್ಧ ಪೊಲೀಸರಿಗೆ ದೂರು








