ನವದೆಹಲಿ: ಆನ್ ಲೈನ್ ವಂಚಕರು ದಿನಕ್ಕೊಂದು ಹಾದಿಯಲ್ಲಿ ಸಾರ್ವಜನಿಕರನ್ನು ವಂಚಿಸಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಇದೀಗ ಹೊಸ ಹಾದಿ ಎನ್ನುವಂತೆ ಇ-ಕೆವೈಸಿ ಹೆಸರಿನಲ್ಲಿ ವಂಚನೆ ಮಾಡೋದಕ್ಕೆ ಶುರುಮಾಡಿದ್ದಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ RBI, ಕೈವೈಸಿ ನವೀಕರಣ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.
ಅಪರಿಚಿತ ಸಂಸ್ಥೆಗಳೊಂದಿಗೆ ದಾಖಲೆಗಳನ್ನು ಸಾರ್ವಜನಿಕರು ಹಂಚಿಕೊಳ್ಳದಂತೆಯೂ ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ಮಾಡಿದೆ.
ಕೆವೈಸಿ ನವೀಕರಣದ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಎಸಗುತ್ತಿರೋ ಬಗ್ಗೆ ವರದಿ ಬರುತ್ತಿದ್ದು, ಇದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳೋ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದಿದೆ.
ಕೆವೈಸಿ ದಾಖಲೆಗಳನ್ನು ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ. ಬ್ಯಾಂಕ್ ಖಾತೆಯ ಲಾಗಿನ್ ಮಾಹಿತಿಯನ್ನು, ಕ್ರೆಡಿಟ್, ಡೆಬಿಟ್ ಕಾರ್ಟ್ ಗಳ ಮಾಹಿತಿ, ಪಿನ್ ಸಂಖ್ಯೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದೆ.
ಪೋನ್ ಕರೆಗಳು, ಇ-ಮೇಲ್ ಮೂಲಕ ಬರೋ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಕೆವೈಸಿ ಸಂಬಂಧಿತ ಯಾವುದೇ ಕರೆ, ಸಂದೇಶ, ಇ-ಮೇಲ್ ಬಂದ್ರೂ ಸಂಬಂಧಿತ ಕಚೇರಿಗೆ ತೆರಳಿ ಅಲ್ಲಿಗೆ ಅಪ್ ಡೇಟ್ ಮಾಡಿ ಎಂಬುದಾಗಿ ಸೂಚಿಸಿದೆ.
BIG NEWS: ‘ಕೇಂದ್ರ ಸರ್ಕಾರ’ದಿಂದ ಅನುದಾನ ತಾರತಮ್ಯ: ಫೆ.7ರಂದು ದೆಹಲಿಯಲ್ಲಿ ‘ರಾಜ್ಯ ಸರ್ಕಾರ’ದಿಂದ ಪ್ರತಿಭಟನೆ
‘ಸಬ್ ರಿಜಿಸ್ಟಾರ್ ಕಚೇರಿ’ ಒಳಗೆ ಸಾರ್ವಜನಿಕರ ‘ಲ್ಯಾಪ್ ಟಾಪ್, ಟ್ಯಾಬ್’ ಬಳಕೆಗೆ ನಿಷೇಧ – ರಾಜ್ಯ ಸರ್ಕಾರ ಆದೇಶ