ಕೆಎನ್ಎನ್ಡಿಜಿಟಲ್ ಡೆಸ್ಕ್ : ಈಗಿನ ಪೀಳಿಗೆಯ ಸೋಷಿಯಲ್ ಮೀಡಿಯಾವನ್ನ ನೆಚ್ಚಿಕೊಂಡಿದೆ. ಲೈಕ್, ಶೇರ್ ಮತ್ತು ವಿವ್ಸ್’ಗಾಗಿ ವಿವಿಧ ವೀಡಿಯೋಗಳನ್ನ ಪೋಸ್ಟ್ ಮಾಡಲಾಗುತ್ತಿದೆ. ಆದ್ರೆ, ರೈಲಿನಲ್ಲಿ ಇಂತಹ ಸಾಹಸ ಮಾಡಿದ್ರೆ ಭಾರೀ ಬೆಲೆ ತೆರಬೇಕಾಗುತ್ತದೆ. ನೀವು ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಸಾಮಾಜಿಕ ಮಾಧ್ಯಮಕ್ಕಾಗಿ ಯಾವುದೇ ಸಾಹಸಗಳನ್ನ ಮಾಡಿದ್ರೆ ನೀವು ತೊಂದರೆಗೆ ಸಿಲುಕುವ ಅಪಾಯವಿದೆ. ಇದಕ್ಕಾಗಿ ಭಾರತೀಯ ರೈಲ್ವೇ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಿದೆ.
ಇತ್ತೀಚೆಗೆ, ಚಲಿಸುತ್ತಿರುವ ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಜನರು ವಿವಿಧ ಸಾಹಸಗಳನ್ನ ಮಾಡುವ ಇಂತಹ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ರೀತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇಂದ್ರ ರೈಲ್ವೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇಂತಹ ವಿಡಿಯೋಗಳನ್ನ ತೆಗೆದವರ ವಿರುದ್ಧ ಪ್ರಕರಣ ದಾಖಲಿಸುವಂತೆ ರೈಲ್ವೆ ರಕ್ಷಣಾ ಪಡೆ ಅಥವಾ ಆರ್ಪಿಎಫ್ಗೆ ಸೂಚಿಸಲಾಗಿದೆ.
ಮುಂಬೈನ ಸೆವ್ರಿ ನಿಲ್ದಾಣದಲ್ಲಿ ಯುವಕನೊಬ್ಬ ಸ್ಥಳೀಯ ರೈಲಿನ ಬಾಗಿಲು ಹಿಡಿದುಕೊಂಡು ಪ್ಲಾಟ್ ಫಾರ್ಮ್ ಮೇಲೆ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊ ವೈರಲ್ ಆದ ನಂತರ ಕೇಂದ್ರ ರೈಲ್ವೆ ಕಠಿಣ ಕ್ರಮಕ್ಕೆ ಆದೇಶಿಸಿದೆ. ವೀಡಿಯೊದಲ್ಲಿ ಸ್ಟಂಟ್ ಮಾಡುತ್ತಿರುವ ಯುವಕನನ್ನ ಹುಡುಕುತ್ತಿದ್ದೇವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ತಮ್ಮ ಜೀವಕ್ಕೆ ಅಥವಾ ಇತರರಿಗೆ ಅಪಾಯವನ್ನುಂಟು ಮಾಡುವ ಇಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ಕೇಂದ್ರ ರೈಲ್ವೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ವಿಡಿಯೋಗಳು ಹರಿದಾಡುತ್ತಿವೆ. ಈ ಕಾರಣದಿಂದಾಗಿ, ರೈಲ್ವೆ ನಿಯಮಗಳು ಹೆಚ್ಚು ಕಠಿಣವಾಗುತ್ತಿವೆ. ಇಂತಹ ಅಪಾಯಕಾರಿ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಉತ್ತರಕನ್ನಡದಲ್ಲಿ ಮತ್ತೊಂದು ಭೂ ಕುಸಿತ ಪ್ರಕರಣ : ಶಿರಸಿ – ಕುಮಟಾ ಹೆದ್ದಾರಿ ಬಂದ್, ಮಾರ್ಗ ಬದಲು
ಮಂಗಳೂರಲ್ಲಿ ರೈಲ್ವೆ ಸಂಬಂಧಿತ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಸಭೆ
ಇದು ಬರೀ ಸೊಪ್ಪಲ್ಲ, ಔಷಧೀಯ ಗಣಿ.! ಎಲ್ಲಾ ನೋವು ಹೋಗಲಾಡಿಸುತ್ತೆ, ರುಚಿಯೂ ಅದ್ಭುತ