Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾವು ಮೊದಲು ಮನುಷ್ಯರು, ನಂತ್ರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು: ಸಿ.ಎಂ.ಸಿದ್ದರಾಮಯ್ಯ

16/05/2025 9:55 PM

ಭದ್ರತಾ ಅನುಮತಿಯನ್ನು ರದ್ದು ಪ್ರಶ್ನಿಸಿ ಭಾರತದ ವಿರುದ್ಧ ಮೊಕದ್ದಮೆ ಹೂಡಿದ ಟರ್ಕಿಯ ಸೆಲೆಬಿ ಏವಿಯೇಷನ್

16/05/2025 9:53 PM

BIG NEWS : ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು : ಬಿಜೆಪಿಯ ತಿರಂಗಾ ಯಾತ್ರೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

16/05/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಎಚ್ಚರ : ಮಕ್ಕಳಲ್ಲಿ​ ಕಾಡುತ್ತಿದೆ `ಥೈರಾಯ್ಡ್‌ ಸಮಸ್ಯೆ’? ಈ ಅಘಾತಕಾರಿ ಕಾರಣಗಳನ್ನ ತಿಳಿಯಿರಿ
LIFE STYLE

ಪೋಷಕರೇ ಎಚ್ಚರ : ಮಕ್ಕಳಲ್ಲಿ​ ಕಾಡುತ್ತಿದೆ `ಥೈರಾಯ್ಡ್‌ ಸಮಸ್ಯೆ’? ಈ ಅಘಾತಕಾರಿ ಕಾರಣಗಳನ್ನ ತಿಳಿಯಿರಿ

By kannadanewsnow5704/09/2024 5:00 AM

ಇಂದಿನ ದಿನದಲ್ಲಿ ಜೀವನ ಶೈಲಿನಿಂದ ಸಾಕಷ್ಟು ರೋಗಗಳು ಬರುತ್ತದೆ. ಹಾರ್ಮೋನ್‌ ಬದಲಾವಣೆಯಿಂದ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ. ಮಕ್ಕಳಲ್ಲೂ ಕೂಡ ಅನೇಕ ಕಾರಣಗಳಿಂದ ಥೈರಾಯ್ಡ್‌ ಸಮಸ್ಯೆ ಉಂಟಾಗುತ್ತದೆ. ಇದು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸಲು ವಿಫಲವಾದಾಗ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ.

ಮತ್ತೊಂದೆಡೆ, ದೇಹವು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಮತ್ತು ಅದರ ಚಯಾಪಚಯವನ್ನು ಹೆಚ್ಚಿಸಿದಾಗ ಹೈಪರ್ ಥೈರಾಯ್ಡಿಸಮ್ ಸಂಭವಿಸುತ್ತದೆ. ಪ್ರತಿಯೊಬ್ಬರಿಗೆ ಹಾರ್ಮೋನ್‌ ಬದಲಾವಣೆ ಥೈರಾಯ್ಡ್‌ ಸಮಸ್ಯೆ ಕಂಡುಬರುತ್ತದೆ. ಇದರ ಆರಂಭಿಕ ಲಕ್ಷಣಗಳೂ ಇದ್ದರೆ ವೈದ್ಯರು ಕಾಣಬೇಕು. ನೀವು ಈ ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ಥೈರಾಯ್ಡ್‌ನಿಂದ ಬೇಗನೆ ಚೇತರಿಸಿಕೊಳ್ಳಬಹುದು.

ಈ ಹೈಪೋಥೈರಾಯ್ಡಿಸಮ್‌ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲಿಯೂ ಉಂಟಾಗುತ್ತದೆ.ಆದ್ದರಿಂದ ಥೈರಾಯ್ಡ್‌ ಗ್ರಂಥಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ ಸರಿಯಾದ ರೀತಿಯ ಆಹಾರವನ್ನು ನೀಡುವುದು ಮುಖ್ಯವಾಗಿರುತ್ತದೆ. ಹಾಗಾದರೆ ಮಕ್ಕಳಲ್ಲಿ ಹೈಪೋಥೈರಾಯ್ಡಿಸಮ್‌ನಂತಹ ಥೈರಾಯ್ಡ್‌ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇನು, ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆಗೆ ಕಾರಣಗಳೆಂದರೆ
* ಆಟೋ ಇಮ್ಯೂನ್‌ ಸಮಸ್ಯೆ
*ಅಯೋಡಿನ್ ಕೊರತೆ
*ಕರುಳಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದು

ಪ್ರೌಢಾವಸ್ಥೆಯ ಹಂತದಲ್ಲಿ ಸರಿಯಾಗಿ ಹಾರ್ಮೋನುಗಳು ಉತ್ಪತ್ತಿಯಾಗದೇ ಇದ್ದರೆ ಥೈರಾಯ್ಡ್‌ ಸಮಸ್ಯೆ ಕಾಡುತ್ತದೆ.
​ಆಯಾಸಸಾಮಾನ್ಯವಾಗಿ ಥೈರಾಯ್ಡ್‌ ಸಮಸ್ಯೆ ಕಾಣಿಸಿಕೊಂಡರೆ ಆಯಾಸ ಕಾಡುತ್ತದೆ. ಅದು ಮಕ್ಕಳಲ್ಲಿಯೂ ಕಾಡುತ್ತದೆ. ಥೈರಾಯ್ಡ್‌ ಸಮಸ್ಯೆ ಇದ್ದರೆ ಮಕ್ಕಳು ಜಡ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ದೈಹಿಕವಾಗಿ ಸದೃಢರಾಗಿರುವುದಿಲ್ಲ. ಜೊತೆಗೆ ಹೊರಗೆ ಹೋಗಿ ಆಟವಾಡುವುದಾಗಲಿ, ಇತರ ಮಕ್ಕಳೊಂದಿಗೆ ಬೆರೆಯದೆ ದಣಿದಂತೆ ಕುಳಿತುಕೊಳ್ಳುವುದನ್ನು ಕಾಣಬಹುದಾಗಿದೆ.

ವಯಸ್ಸಿಗೆ ಮೀರಿದ ದೇಹದ ತೂಕ
ಇತ್ತೀಚೆಗೆ ಸಣ್ಣ ಮಕ್ಕಳಲ್ಲಿಯೇ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಜಂಕ್‌ಫುಡ್‌ಗಳ ಸೇವನೆ ಒಂದು ಕಾರಣವಾದರೆ ಥೈರಾಯ್ಡ್‌ ಸಮಸ್ಯೆ ಇನ್ನೊಂದು ಕಾರಣವಾಗಿರುತ್ತದೆ. ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆ ಉಂಟಾದರೆ ದೇಹದಲ್ಲಿ ತೂಕ ಏರಿಕೆಯಾಗುವುದನ್ನು ಕಾಣಬಹುದಾಗಿದೆ. ಅಲ್ಲದೆ ಜೀರ್ಣಶಕ್ತಿ ಕೂಡ ನಿಧಾನವಾಗುತ್ತದೆ. ಇದರಿಂದ ದೇಹದ ತೂಕ ವಯಸ್ಸಿಗಿಂತ ಹೆಚ್ಚಾಗಿ ಬೆಳೆಯಲು ಕಾರಣವಾಗುತ್ತದೆ.

ಮಲಬದ್ಧತೆ

ಮಕ್ಕಳಲ್ಲಿ ಮಲಬದ್ಧತೆ ಸಾಮಾನ್ಯ. ಆದರೆ ಪದೇ ಪದೇ ಮಲಬದ್ಧತೆಯಾಗುವುದು, ಏನು ಮಾಡಿದರೂ ಸರಿಯಾಗದೇ ಇರುವ ಸ್ಥಿತಿ ಇದ್ದರೆ ಅದು ಹೈಪೋಥೈರಾಯ್ಡಿಸಮ್‌ನ ಲಕ್ಷಣವೂ ಆಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ ಥೈರಾಯ್ಡ್‌ ಪರೀಕ್ಷೆ ಮಾಡಿಸುವುದು ಉತ್ತಮ.

ಬೆಳವಣಿಗೆಯ ಕೊರತೆ

ಬೆಳೆಯುವ ಮಕ್ಕಳಲ್ಲಿ ಎತ್ತರ, ದೇಹ ಎಲ್ಲವೂ ಬದಲಾಗುತ್ತಿರುತ್ತದೆ. ಆದರೆ ಥೈರಾಯ್ಡ್‌ ಸಮಸ್ಯೆ ಇದ್ದರೆ ಮಕ್ಕಳ ಬೆಳವಣಿಗೆಗೆ ಕುಂಠಿತವಾಗುತ್ತದೆ. ಇದರಿಂದಾಗಿ ಮಕ್ಕಳು ಎತ್ತರವಾಗದೇ ಇರುವುದು, ತೂಕ ಹೆಚ್ಚಳವಾಗುವುದನ್ನು ಕಾಣಬಹುದು. ಇದು ಹಾರ್ಮೋನುಗಳ ಉತ್ಪತ್ತಿಯಲ್ಲಿ ವ್ಯತ್ಯಾಸವಾದಾಗ ಉಂಟಾಗುತ್ತದೆ. ಆದ್ದರಿಂದ ಥೈರಾಯ್ಡ್‌ ಗ್ರಂಥಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದನ್ನು ಮರೆಯುವಂತಿಲ್ಲ.

ಮಕ್ಕಳಲ್ಲಿ ಬೆಳವಣಿಗೆ

​ಇತರ ಲಕ್ಷಣಗಳೆಂದರೆಮಕ್ಕಳಲ್ಲಿ ಬೆಳವಣಿಗೆಯ ಕುಂಠಿತವನ್ನು ಹೈಪೋಥೈರಾಯ್ಡಿಸಮ್‌ ಉಂಟು ಮಾಡುತ್ತದೆ. ಹೀಗಾಗಿ ಮಕ್ಕಳಲ್ಲಿ ಚಟುವಟಿಕೆ ಕಡಿಮೆಯಾಗಬಹುದು. ಅಲ್ಲದೆ ಸರಿಯಾಗಿ ಪ್ರತಿಕ್ರಿಯೆ ನೀಡದೇ ಇರುವುದು, ಏಕಾಗ್ರತೆಯ ಕೊರತೆ, ಸದಾ ಆಯಾಸದ ಲಕ್ಷಣಗಳನ್ನು ಹೊಂದಿರುತ್ತಾರೆ.

ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆ ಕ್ರಮೇಣ ಗೊತ್ತಾಗುವ ಕಾರಣ ಸಣ್ಣ ಪುಟ್ಟ ಲಕ್ಷಣಗಳನ್ನು ಗುರುತಿಸಿ ಕಾಲಕಾಲಕ್ಕೆ ತಕ್ಕ ಹಾಗೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಒಳಿತು. ಇದರಿಂದ ಭವಿಷ್ಯದಲ್ಲಿ ಬರುವ ಅಪಾಯವನ್ನು ತಡೆಯಬಹುದಾಗಿದೆ.

Beware of parents: What is the 'thyroid problem' in children? Know these shocking causes ಪೋಷಕರೇ ಎಚ್ಚರ : ಮಕ್ಕಳಲ್ಲಿ​ ಕಾಡುತ್ತಿದೆ `ಥೈರಾಯ್ಡ್‌ ಸಮಸ್ಯೆ'? ಈ ಅಘಾತಕಾರಿ ಕಾರಣಗಳನ್ನ ತಿಳಿಯಿರಿ
Share. Facebook Twitter LinkedIn WhatsApp Email

Related Posts

ಚಿಕನ್‌ ಪ್ರಿಯರೇ ಗಮನಿಸಿ: ಕೋಳಿಯ ಈ ಭಾಗವನ್ನು ಅಪ್ಪಿ-ತಪ್ಪಿ ತಿನ್ನಬೇಡಿ..!

15/05/2025 9:44 AM1 Min Read

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM2 Mins Read

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM2 Mins Read
Recent News

ನಾವು ಮೊದಲು ಮನುಷ್ಯರು, ನಂತ್ರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು: ಸಿ.ಎಂ.ಸಿದ್ದರಾಮಯ್ಯ

16/05/2025 9:55 PM

ಭದ್ರತಾ ಅನುಮತಿಯನ್ನು ರದ್ದು ಪ್ರಶ್ನಿಸಿ ಭಾರತದ ವಿರುದ್ಧ ಮೊಕದ್ದಮೆ ಹೂಡಿದ ಟರ್ಕಿಯ ಸೆಲೆಬಿ ಏವಿಯೇಷನ್

16/05/2025 9:53 PM

BIG NEWS : ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು : ಬಿಜೆಪಿಯ ತಿರಂಗಾ ಯಾತ್ರೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

16/05/2025 9:36 PM

ಆರುಮುಗ ಪ್ರಾಮಾಣಿಕತೆ ಮೆರೆದು ನೀಡಿದ್ದ ಹಣ, ಕಳೆದುಕೊಂಡವರಿಗೆ ಹಿಂತಿರುಗಿಸಿದ ಸಾಗರ ಟೌನ್ ಪೊಲೀಸರು

16/05/2025 9:23 PM
State News
KARNATAKA

ನಾವು ಮೊದಲು ಮನುಷ್ಯರು, ನಂತ್ರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು: ಸಿ.ಎಂ.ಸಿದ್ದರಾಮಯ್ಯ

By kannadanewsnow0916/05/2025 9:55 PM KARNATAKA 1 Min Read

ಮಂಗಳೂರು: ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು ಎಂದು ಸಿ.ಎಂ ಸಿದ್ದರಾಮಯ್ಯ ಅವರು…

BIG NEWS : ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು : ಬಿಜೆಪಿಯ ತಿರಂಗಾ ಯಾತ್ರೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

16/05/2025 9:36 PM

ಆರುಮುಗ ಪ್ರಾಮಾಣಿಕತೆ ಮೆರೆದು ನೀಡಿದ್ದ ಹಣ, ಕಳೆದುಕೊಂಡವರಿಗೆ ಹಿಂತಿರುಗಿಸಿದ ಸಾಗರ ಟೌನ್ ಪೊಲೀಸರು

16/05/2025 9:23 PM

BREAKING : ಡಿಕೆ ಶಿವಕುಮಾರ್ ‘CM’ ವಿಜಯೇಂದ್ರ ‘DCM’ ಎಂದು ದೆಹಲಿಯಲ್ಲಿ ಒಪ್ಪಂದವಾಗಿತ್ತು : ಯತ್ನಾಳ್ ಹೊಸ ಬಾಂಬ್!

16/05/2025 8:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.