ಬೆಳಗಾವಿ : ಮಕ್ಕಳನ್ನು ಹೊರಗೆ ಆಟ ಆಡಲು ಬಿಡುವ ಮುನ್ನ ಪೋಷಕರೇ ಎಚ್ಚರ, ಕಾಲುವೆಗೆ ಜಾರಿಗೆ ಬಿದ್ದು 4 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಕಾಲುವೆಗೆ ಜಾರಿಬಿದ್ದು 4 ವರ್ಷದ ಮಗು ಸಾವನ್ನಪ್ಪಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಚಿಕ್ಕೋಡಿಯ ಅರುಣ್ ಸಿದ್ದಿ (4) ಎಂಬ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.