ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಏರುತ್ತಿದೆ. ಈ ಸಮಯದಲ್ಲೇ ಬಾಯಿ ತಂಪಾಗಿಸಲು ಕಲ್ಲಂಗಡಿ ಹಣ್ಣಿನ ಮೊರೆಯನ್ನು ಜನರು ಹೋಗುತ್ತಿದ್ದಾರೆ. ಆದರೇ ಹೀಗೆ ಕಲ್ಲಂಗಡಿ ಹಣ್ಣನ್ನು ನೀವು ತಿನ್ನುತ್ತಾ ಇದ್ದರೇ ಎಚ್ಚರ ವಹಿಸಿ. ಯಾಕೆಂದ್ರೆ ನಿಮ್ಮ ಆರೋಗ್ಯದ ಮೇಲೆ ಅದಕ್ಕೆ ನೀಡುವಂತ ಕೃತಕ ಬಣ್ಣ ಪರಿಣಾಮ ಬಿರಲಿದೆ ಅಂತೆ.
ಹೌದು.. ಕಲ್ಲಂಗಡಿ ಹಣ್ಣನ್ನು ಅತಿ ಹೆಚ್ಚು ಕೆಂಪಾಗಿಸಲು ಕೃತಕ ಬಣ್ಣದ ಇಂಜೆಕ್ಷನ್ ಮಾಡುತ್ತಿದ್ದಾರೆ ಎನ್ನುವಂತ ಆಘಾತಕಾರಿ ಮಾಹಿತಿಯನ್ನು ಮಾರಾಟಗಾರರೇ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಹಾಕಿದ್ದಾರೆ ಅನ್ನೋದು ನಮಗೆ ಗೊತ್ತಾಗೋದಿಲ್ಲ. ಆದರೇ ಹಣ್ಣಿನ ಕಲ್ಲರ್ ಹೆಚ್ಚಾಗಿದ್ದರೇ ಅದು ಕೃತಕ ಬಣ್ಣದ ಇಂಜೆಕ್ಷನ್ ಮಾಡಿರೋದು ಎಂಬುದಾಗಿ ಪರಿಗಣಿಸಬಹುದಾಗಿ ಅಂತ ಹೇಳಿದ್ದಾರೆ.
ಕೃತಕ ಬಣ್ಣದ ಇಂಜೆಕ್ಷನ್ ಅನ್ನು ಕಲ್ಲಂಗಡಿ ಹಣ್ಣಿಗೆ ಮಾಡುವುದರಿಂದ ಅತೀ ಹೆಚ್ಚು ಕೆಂಪನೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಸಪ್ಪೆಯಾಗಿದ್ದಂತ ಹಣ್ಣು ಹೆಚ್ಚು ರುಚಿಕೂಡ ಪಡೆಯುತ್ತದೆ. ಇಂತಹ ಹಣ್ಣನ್ನು ತಿನ್ನುವಂತವರ ಆರೋಗ್ಯದ ಮೇಲೆ ಅಷ್ಟೇ ಪರಿಣಾಮವನ್ನು ಕೂಡಲೇ ಬೀರದೇ ಇದ್ದರೂ ಕಾಲಾನಂತ್ರ ಬೀರಲಿದೆ ಎಂಬುದು ಹಲವರ ಮಾತಾಗಿದೆ.
ಸೋ ಸಾರ್ವಜನಿಕರೇ ಬೇಸಿಗೆ ಬಿಸಿಲಿನಲ್ಲಿ ಬಸವಳಿದು ಕಲ್ಲಂಗಡಿ ಹಣ್ಣನ್ನು ತಿನ್ನೋ ಮೊದಲು ಎಚ್ಚರ ವಹಿಸಿ. ಕೃತಕ ಬಣ್ಣವನ್ನು ನೀಡಿದ ಬಗ್ಗೆ ಟಿಶ್ಯೂ ಪೇಪರ್ ಮೂಲಕ ಕಲ್ಲಂಗಡಿ ಹಣ್ಣನ್ನು ಒರೆಸಿ ನೋಡಿ. ಟಿಶ್ಯೂ ಪೇಪರಿಗೆ ಬಣ್ಣ ಹತ್ತಿದರೇ ಅದು ಕೃತಕ ಬಣ್ಣವನ್ನು ನೀಡಿರುವಂತ ಹಣ್ಣಾಗಿರುತ್ತದೆ ಎಂಬುದು ಬಲ್ಲವರ ಮಾಹಿತಿಯಾಗಿದೆ.
ಬದ್ಧತೆ, ಶಿಸ್ತಿನಿಂದ ಕಲಿತರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾರಂತೆ ಸಾಧನೆ ಮಾಡಬಹುದು: ಮಕ್ಕಳಿಗೆ DKS ಕಿವಿಮಾತು
‘ದಲಿತರ ಹಣ’ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ‘ಛಲವಾದಿ ನಾರಾಯಣಸ್ವಾಮಿ’ ಆಕ್ಷೇಪ