ಶಿವಮೊಗ್ಗ: ಬಹುತೇಕ ಜನರು ಯಾವುದೇ ಕಂಪನಿಯ ಆಹಾರದ ತಿನಿಸಾದರೂ ಗುಣಮಟ್ಟವನ್ನು ಇಷ್ಟ ಪಡುತ್ತಾರೆ. ಅದಕ್ಕೆ ಹೆಚ್ಚು ಒತ್ತು ನೀಡಿಯೇ ಕಂಪನಿಗಳು ಆಹಾರವನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಆದರೇ ಸ್ಪರ್ಷ್ ಬಾದಾಮ್ ಪೌಡರ್ ಮಾತ್ರ ಇದಕ್ಕೆ ಹೊರತಾದಂತಿದೆ. ಈ ಪೌಡರ್ ಖರೀದಿಸಿದಂತ ವ್ಯಕ್ತಿಯೊಬ್ಬರಿಗೆ ಪ್ಯಾಕೇಟ್ ನಲ್ಲಿ ಪ್ಲಾಸ್ಟಿಕ್ ಪೇಪರ್, ವಯರ್ ಪತ್ತೆಯಾಗಿದೆ. ಆ ಬಗ್ಗೆ ಮುಂದೆ ಓದಿ, ನೀವೇ ಅಚ್ಚರಿ ಪಡ್ತೀರಿ. ಖರೀದೋಸು ಬಿಡ್ತೀರಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಮಾರಿಗುಡಿ ದೇವಸ್ಥಾನದ ಸಮೀಪದಲ್ಲಿರುವಂತ ಗಜಾನನ ರೈಸ್ ಸ್ಟೋರ್ ನಿಂದ ವ್ಯಕ್ತಿಯೊಬ್ಬರು ಸ್ಪರ್ಶ್ ಬಾದಾಪ್ ಪೌಡರ್ ಅನ್ನು ಖರೀದಿಸುತ್ತಾರೆ. ಮಗಳಿಗೆ ಇಷ್ಟವಾದಂತ ಬಾದಾಮ್ ಪೌಡರ್ ಖರೀದಿಸಿ ಮನೆಗೆ ಕೊಂಡೊಯ್ದು ನೀಡಿದ್ದಾರೆ.
ಸ್ಪರ್ಶ್ ಬಾದಾಮ್ ಪೌಡರ್ ಅನ್ನು ಬಟ್ಟಲಿಗೆ ಹಾಕಿಕೊಂಡು ತಿನ್ನುವಂತ ಸಂದರ್ಭದಲ್ಲಿ ಮೊದಲಿಗೆ ಪ್ಲಾಸ್ಟಿಕ್ ವಯರ್ ಮಾದರಿಯ ವಸ್ತುವೊಂದು ಪತ್ತೆಯಾಗುತ್ತದೆ. ಇದನ್ನು ಪೋಷಕರ ಗಮನಕ್ಕೆ ತಂದಿದ್ದಾರೆ. ಇದನ್ನು ಕಂಡಂತ ಅವರಿಗೆ ಅಚ್ಚರಿಯಾಗಿದೆ. ಅದನ್ನು ತೆಗೆದು ಬಿಸಾಡಿದ ಬಳಿಕ, ಬಾದಾಮ್ ಪೌಡರ್ ಪುತ್ರಿ ತಿಂದಿದ್ದಾರೆ.
ಸರಿ ಇನ್ನೂ ಉಳಿದಂತ ಸ್ಪರ್ಶ್ ಕಂಪನಿಯ ಬಾದಾಮ್ ಪೌಡರ್ ಅನ್ನು ತಿನ್ನುತ್ತಿದ್ದಾಗ ಮತ್ತೆ ಪ್ಲಾಸ್ಟಿಕ್ ಪೇಪರ್ ಮಾದರಿಯ ವಸ್ತುವೊಂದು ಪುತ್ರಿಗೆ ಸಿಕ್ಕಿದೆ. ಅದನ್ನು ಕಂಡಂತ ತಂದೆಗೆ ಸಿಟ್ಟು ಕೋಪ ಕೂಡ ಬಂದಿದೆ.
ಕೂಡಲೇ ಸ್ಪರ್ಷ್ ಕಂಪನಿಯ ಬಾದಾಮ್ ಪೌಡರ್ ಮೇಲಿದ್ದಂತ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸುತ್ತಾರೆ. ಬಸವನಗೌಡ ಎಂಬುವರು ಖುದ್ದು ಗ್ರಾಹಕರನ್ನು ಭೇಟಿಯಾಗಿ, ಮಾಹಿತಿಯನ್ನು ಪಡೆಯಲಾಗುತ್ತದೆ. ಆದರೇ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಇನ್ನೂ ಸ್ಪರ್ಷ್ ಕಂಪನಿಯ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಗ್ರಾಹಕರು ತಿಳಿಸಿದ್ದಾರೆ. ಅಲ್ಲದೇ ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ, ಸಂಬಂಧಿಸಿದಂತ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಗ್ರಾಹಕರಾಗಿ ನೀವು ಯೋಚಿಸಿ, ನಿಮ್ಮ ಮಗಳಿಗೆ ತಂದು ಕೊಟ್ಟಾಗಲೋ, ನೀವು ಸೇವಿಸಿದಾಗಲೋ ಈ ತರದ ಪ್ಲಾಸ್ಟಿಕ್ ವಸ್ತು ನಿಮ್ಮ ಹೊಟ್ಟೆ ಸೇರಿದ್ದರೇ ಮುಂದೆ ಏನಾಗುತ್ತಿತ್ತು.? ಪ್ರಾಣಹಾನಿಯೋ, ಅನಾಹುತವೋ ಆಗಿದ್ದರೆ ಇದಕ್ಕೆ ಯಾರು ಹೊಣೆ.? ಈ ಕೂಡಲೇ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು