ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ಪಿರಿಯಡ್ಸ್‌ ನಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.‌

ಮಹಿಳೆಯರೇ, ‘ಪಿರಿಯಡ್ಸ್’ ಸಮಯದಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ.? ಇಲ್ಲಿದೆ ಮಾಹಿತಿ

 

ಆದರೆ ಇಂತಹ ನಂಬಿಕೆಗಳು ಮಹಿಳೆಯರಿಗೆ ಎಷ್ಟು ಸಮಸ್ಯೆ ಉಂಟು ಮಾಡಲಿದೆ ಎಂಬ ಅರಿವು ಹಲವರಿಗೆ ಇರುವುದಿಲ್ಲ. ಆರೋಗ್ಯ ಮತ್ತು ಸಂತಾನ ಪ್ರಕ್ರಿಯೆಗೆ ಮುಟ್ಟು ಬಹಳ ಮುಖ್ಯ. ಹಾಗಾಗಿ ಈ ಅವಧಿಯಲ್ಲಿ ಶುಚಿತ್ವ ಕಾಪಾಡುವುದು ಬಹಳ ಮುಖ್ಯ. ಇಲ್ಲವಾದರೆ ಇನ್‌ಫೆಕ್ಷನ್ ಜೊತೆಗೆ ಮಾರಣಾಂತಿಕ ಸಮಸ್ಯೆಗಳೂ ಎದುರಾಗುವ ಸಾಧ್ಯತೆ ಬಹಳ ಹೆಚ್ಚು.
ಪಿರಿಯಡ್ಸ್ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಈ ಸಮಯದಲ್ಲಿ ಏನೆಲ್ಲಾ ಜಾಗ್ರತೆಗಳನ್ನು ತೆಗೆದುಕೊಳ್ಳಬೇಕು ಎಂಬುದು ತಿಳಿದುಕೊಳ್ಳೊಣ.
ಕೈಗಳನ್ನು ತೊಳೆದುಕೊಳ್ಳಬೇಕು: ಬಹಳ ಸಮಯ ಒಂದೇ ಪ್ಯಾಡ್‌ನಲ್ಲಿ ಇರಬೇಡಿ. 5 ಗಂಟೆಗಳಿಗೆ ಒಮ್ಮೆ ಪ್ಯಾಡ್‌ ಅಥವಾ ಕಪ್‌ ಬದಲಾಯಿಸಿ. ಆ ರೀತಿ ಬದಲಿಸುವಾಗ ಮೊದಲು ಹಾಗೂ ನಂತರ ನಿಮ್ಮ ಕೈಗಳನ್ನು ಒಂದೊಳ್ಳೆ ಸಾಬೂನಿನಿಂದ ತೊಳೆದುಕೊಳ್ಳಿ. ಇದರಿಂದ ಬ್ಯಾಕ್ಟೀರಿಯಾ ಹರಡುವಿಕೆಯನ್ನು ತಡೆಯಬಹುದು.

ಮಹಿಳೆಯರೇ, ‘ಪಿರಿಯಡ್ಸ್’ ಸಮಯದಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ.? ಇಲ್ಲಿದೆ ಮಾಹಿತಿ

 

ಜನನಾಂಗವನ್ನು ಸ್ಚಚ್ಛಗೊಳಿಸಿ: ಪಿರಿಯಡ್ಸ್‌ ಸಮಯದಲ್ಲಿ ತಪ್ಪದೆ ಪ್ರತಿ ದಿನ ಸ್ನಾನ ಮಾಡಿ. ಸಾಧ್ಯವಾದರೆ ಎರಡು ಬಾರಿ ಸ್ನಾನ ಮಾಡಲು ಪ್ರಯತ್ನಿಸಿ. ನೀವು ಪ್ಯಾಡ್‌ ಬದಲಿಸುವಾಗಲೆಲ್ಲಾ ನಿಮ್ಮ ಜನನಾಂಗವನ್ನು ಬಿಸಿ ನೀರಿನಿಂದ ಸ್ವಚ್ಚಗೊಳಿಸುವುದು ಬಹಳ ಒಳ್ಳೆಯದು.
ಯಾವುದೇ ಕಾರಣಕ್ಕೂ ಹಳೆ ಕಾಲದಂತೆ ಬಟ್ಟೆ ಬಳಸಬೇಡಿ; ಪ್ರಪಂಚ ಬಹಳ ಮುಂದುವರೆದಿದೆ. ಇಷ್ಟಾದರೂ ಕೆಲವರು ಸ್ಯಾನಿಟರಿ ಪ್ಯಾಡ್‌ ಬಳಸದೆ ಅಮ್ಮನ ಹಳೆಯ ಸೀರೆ, ಅಥವಾ ಕಾಟನ್‌ ಬಟ್ಟೆಗಳನ್ನು ಬಳಸುತ್ತಾರೆ. ನೀವು ಹೀಗೆ ಮಾಡುತ್ತಿದ್ದರೆ ತಕ್ಷಣವೇ ನಿಲ್ಲಿಸಿ, ಉತ್ತಮ ಗುಣಮಟ್ಟದ ಪ್ಯಾಡ್‌ ಬಳಸಿ. ಇಲ್ಲದಿದ್ದರೆ ಇದು ಮುಂದಿನ ದಿನಗಳಲ್ಲಿ ಗರ್ಭಕೋಶದ ಸಮಸ್ಯೆಗೆ ಕಾರಣವಾಗಬಹುದು.
ಪ್ಯಾಡ್‌ಗಳನ್ನು ಸರಿಯಾಗಿ ಸುತ್ತಿ ಡಸ್ಟ್‌ಬಿನ್‌ಗೆ ಹಾಕಿ: ಕೆಲವರು ಬಳಸಿದ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ ನಿಮ್ಮಿಂದ ಇತರರಿಗೂ ಸಮಸ್ಯೆ ಕಾಡಬಹುದು. ಅದರ ಬದಲಿಗೆ ಪ್ಯಾಡನ್ನು ಒಂದು ಪೇಪರ್‌ನಲ್ಲಿ ಸುತ್ತಿ, ಕವರ್‌ ಒಳಗೆ ಕಟ್ಟಿ ಡಸ್ಟ್‌ ಬಿನ್‌ಗೆ ಹಾಕಿ.

Share.
Exit mobile version