ಬೆಂಗಳೂರು: ವ್ಹೀಲಿಂಗ್, ಮದ್ಯ ಸೇವನೆ ಮಾಡಿ ವಾಹನ ಓಡಿಸೋರ ವಿರುದ್ಧ ಕಠಿಣ ನಿಲುವನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಒಂದು ವೇಳೆ ವ್ಹೀಲಿಂಗ್, ಮದ್ಯ ಸೇವನೆ ಮಾಡಿ ವಾಹನ ಓಡಿಸಿದ್ರೇ ಡಿಎಲ್ ರದ್ದುಗೊಳಿಸೋದಾಗಿ ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ. ಅಲ್ಲದೇ ಈಗಾಗಲೇ 711 ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿರೋದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2023 ನೇ ಸಾಲಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಮಾರಣಾಂತಿಕ ಅಪಘಾತ ಹಾಗೂ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳಲ್ಲಿ ಭಾಗಿಯಾದ ಚಾಲಕರ/ಸವಾರರ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಜಪ್ತಿಪಡಿಸಿಕೊಂಡು, ಸದರಿ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಬೆಂಗಳೂರು ನಗರ ಸೇರಿದಂತೆ, ಕರ್ನಾಟಕದ ಇತರೆ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಕಛೇರಿಗಳಿಗೆ ಒಟ್ಟು 2974 ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಮಾನತ್ತು ಪಡಿಸಲು ಕಳುಹಿಸಿಕೊಡಲಾಗಿರುತ್ತದೆ ಎಂದಿದ್ದಾರೆ.
ಈ ರೀತಿ ಅಮಾನತ್ತುಪಡಿಸಲು ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಕಳುಹಿಸಿಕೊಟ್ಟ 2974 ಡ್ರೈವಿಂಗ್ ಲೈಸೆನ್ಸ್‌ಗಳಲ್ಲಿ 711 ಡ್ರೈವಿಂಗ್ ಲೈಸೆನ್ಸ್‌ಗಳನ್ನು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಛೇರಿಯ ಅಧಿಕಾರಿಗಳು ಕಾನೂನಿನ ರೀತ್ಯಾ ಕ್ರಮಕೈಗೊಂಡು ಅಮಾನತ್ತು ಪಡಿಸಲಾಗಿದ್ದು, ಉಳಿದ 2263 ಡ್ರೈವಿಂಗ್ ಲೈಸೆನ್ಸ್‌ಗಳ ಅಮಾನತ್ತು ಪಡಿಸುವ ಪ್ರಕ್ರಿಯೆಯು ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
BREAKING: ಮಂಗಳೂರಲ್ಲಿ ನಟೋರಿಯಸ್ ‘ರೌಡಿ ಶೀಟರ್’ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್
‘ಸವದತ್ತಿ ಯಲ್ಲಮ್ಮನ ಭಕ್ತ’ರಿಗೆ ಗುಡ್ ನ್ಯೂಸ್: ಸಮಗ್ರ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಾಸ್ಟರ್ ಫ್ಲ್ಯಾನ್