ನವದೆಹಲಿ : 2024ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಎಂಬ ಶೀರ್ಷಿಕೆಯಡಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಮುಂದಿನ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದಿದೆ. ಇನ್ನು ಮೂಡ್ ಆಫ್ ದಿ ನೇಷನ್ ಫೆಬ್ರವರಿ 2024ರ ಆವೃತ್ತಿಯು ಎಲ್ಲಾ ಲೋಕಸಭಾ ಕ್ಷೇತ್ರಗಳಾದ್ಯಂತ 35,801 ಜನರ ಅಭಿಪ್ರಾಯವನ್ನ ಆಧರಿಸಿದೆ. ಸಮೀಕ್ಷೆಯನ್ನ ಡಿಸೆಂಬರ್ 15, 2023 ರಿಂದ ಜನವರಿ 28, 2024ರ ನಡುವೆ ನಡೆಸಲಾಗಿದೆ.
ಈ ಸಮೀಕ್ಷೆಯಲ್ಲಿ ಜನರು ನರೇಂದ್ರ ಮೋದಿಯವರನ್ನ ಇದುವರೆಗೆ ಭಾರತದ ಅತ್ಯುತ್ತಮ ಪ್ರಧಾನಿ ಎಂದು ಮತ ಹಾಕಿದ್ದು, 44ರಷ್ಟು ಜನರು ಅವರನ್ನ ಬೆಂಬಲಿಸಿದ್ದಾರೆ. ಶೇ 15ರಷ್ಟು ಮಂದಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಶೇ 14ರಷ್ಟು ಮಂದಿ ಕಾಂಗ್ರೆಸ್ ನಾಯಕಿ ಮತ್ತು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರನ್ನ ಅತ್ಯುತ್ತಮ ಪ್ರಧಾನಿ ಎಂದು ಪರಿಗಣಿಸಿದ್ದಾರೆ. ಆದರೆ, ಶೇ.11ರಷ್ಟು ಮಂದಿ ಮನಮೋಹನ್ ಸಿಂಗ್ ಅವರನ್ನ ಆಯ್ಕೆ ಮಾಡಿದ್ದಾರೆ.
ನರೇಂದ್ರ ಮೋದಿಯವರ ಆಡಳಿತದ ಬಗ್ಗೆ ಅವರು ಹೆಚ್ಚು ನೆನಪಿಸಿಕೊಳ್ಳುವುದು ಏನು ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 42ರಷ್ಟು ಜನರು ಅಯೋಧ್ಯೆ ರಾಮಮಂದಿರ ಎಂದು ಹೇಳಿದ್ದಾರೆ. ಇನ್ನು 19 ಪ್ರತಿಶತದಷ್ಟು ಜನರು ಭಾರತದ ಇಮೇಜ್ ಜಾಗತಿಕವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇನ್ನು 12 ಪ್ರತಿಶತದಷ್ಟು ಜನರು ಕಾಶ್ಮೀರದಲ್ಲಿ 370ನೇ ವಿಧಿಯನ್ನ ರದ್ದುಗೊಳಿಸಿರುವುದು ಮೋದಿ ಸರ್ಕಾರಕ್ಕೆ ಧನಾತ್ಮಕವಾಗಿದೆ ಎಂದು ಹೇಳಿದ್ದಾರೆ. 9 ಪ್ರತಿಶತ ಜನರು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್‌ಗಳು, 6 ಪ್ರತಿಶತ ನೋಟು ಅಮಾನ್ಯೀಕರಣ, 6 ಪ್ರತಿಶತ ಕೋವಿಡ್ ನಿರ್ವಹಣೆ ಮತ್ತು 5 ಪ್ರತಿಶತ ಜನರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
BREAKING : ‘ಪ್ರಧಾನಿ ಮೋದಿ’ಗೆ ಪತ್ರ ಬರೆದ ‘ರಾಹುಲ್ ಗಾಂಧಿ’ : ‘ಲೆಟರ್’ನಲ್ಲಿ ಇರೋದೇನು ಗೊತ್ತಾ.?
ಇಚ್ಛೆಯ ಅನುಸಾರ ಪ್ರತ್ಯೇಕವಾಗಿ ವಾಸಿಸುವ ಮಹಿಳೆಗೆ ತನ್ನ ಗಂಡನಿಂದ ‘ಜೀವನಾಂಶ’ ಕೇಳುವ ಹಕ್ಕಿಲ್ಲ : ಕೋರ್ಟ್
ನೌಕಾಪಡೆ ಮಾಜಿ ಯೋಧರ ಬಿಡುಗಡೆಯ ಕ್ರೆಡಿಟ್ ‘ಪ್ರಧಾನಿ ಮೋದಿ’ಗೆ ಕೊಟ್ಟ ‘MEA’ : ‘ಕತಾರ್’ ಭೇಟಿ ಘೋಷಣೆ