ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲೆ ಏಪ್ರಿಲ್ 13 ರಿಂದ ಏಪ್ರಿಲ್ 17 ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧಕ್ಕೆ ಕಾರಣವೇನು?
ಪೀಣ್ಯ ಫ್ಲೈಓವರ್‌ನಲ್ಲಿ ಅಳವಡಿಸಲಾದ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ವೇತುವೆಯ ಸಮಗ್ರತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಅಂತಿಮ ‘ಲೋಡ್ ಟೆಸ್ಟಿಂಗ್’ (Load Testing) ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸಂಚಾರ ನಿರ್ಬಂಧಕ್ಕೆ ಕೋರಿಕೆ ಸಲ್ಲಿಸಿದೆ.
ನಿರ್ಬಂಧದ ಸಮಯ:
-
ಪ್ರಾರಂಭ: ದಿನಾಂಕ 13-04-2026, ಬೆಳಿಗ್ಗೆ 05:00 ಗಂಟೆಗೆ.
-
ಅಂತ್ಯ: ದಿನಾಂಕ 17-04-2026, ಬೆಳಿಗ್ಗೆ 11:00 ಗಂಟೆಗೆ.
ಯಾವ ಮಾರ್ಗದಲ್ಲಿ ಸಂಚಾರ ಬಂದ್?
ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್‌ನಿಂದ (Upper ramp) ಎಸ್.ಆರ್.ಎಸ್ ಡೌನ್ ರಾಂಪ್‌ವರೆಗೆ (Down ramp) ಫ್ಲೈಓವರ್‌ನ ಎರಡು ಬದಿಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
1. ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವವರು: ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಸಾಗಿ, 8ನೇ ಮೈಲಿ → ದಾಸರಹಳ್ಳಿ → ಜಾಲಹಳ್ಳಿ ಕ್ರಾಸ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್.ಆರ್.ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ ತಲುಪಬಹುದು.
2. ಬೆಂಗಳೂರಿನಿಂದ (CMTI) ನೆಲಮಂಗಲ ಕಡೆಗೆ ಹೋಗುವವರು: ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಸಾಗಿ, ಎಸ್.ಆರ್.ಎಸ್ ಜಂಕ್ಷನ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ → 8ನೇ ಮೈಲಿ → ಪಾರ್ಲೆಜಿ ಟೋಲ್ ಮೂಲಕ ಸಾಗಬಹುದು.
ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಬೆಂಗಳೂರು ಸಂಚಾರ ಪೊಲೀಸರು ವಿನಂತಿಸಿದ್ದಾರೆ.








