ಬೆಂಗಳೂರು: ನಗರದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ಫ್ಲವರ್ ಶೋ ನಡೆಯುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 32,950 ಮಂದಿ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತಂತೆ ತೋಟಗಾರಿಕೆ ಇಲಾಖೆಯ ಅಪರ ನಿರ್ದಏಶಕ ಡಾ.ಎಂ ಜಗದೀಶ್ ಮಾಹಿತಿ ನೀಡಿದ್ದು, ಲಾಲ್ ಬಾಗ್ ನಲ್ಲಿ ಜರುಗುತ್ತಿರುವ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲ ಪುಷ್ಪ ಪ್ರದರ್ಶನಕ್ಕೆ ದಿನಾಂಕ 15/01/2026 ರಂದು ಒಟ್ಟು ಆಗಮಿಸಿದ ವೀಕ್ಷರ ಸಂಖ್ಯೆ 32,950. ವಯಸ್ಕರು:24950. ಮಕ್ಕಳು :3750. ಶಾಲಾ ವಿದ್ಯಾರ್ಥಿಗಳು;4250. ಸಂಗ್ರಹವಾದ ಮೊತ್ತ:21,56,330 ಆಗಿದೆ ಎಂಬುದಾಗಿ ತಿಳಿಸಿದ್ದಾರೆ.
ಲಾಲ್ ಬಾಗ್ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನದ ಅಂಗವಾಗಿ, ನಾಳೆ 16-01-2026 ಶುಕ್ರವಾರದಂದು ಸಂಜೆ 5.00 ಗಂಟೆಗೆ ನನ್ನ ತೇಜಸ್ವಿ ನಾಟಕದ ಪ್ರದರ್ಶನವಿರುತ್ತದೆ ಎಂಬುದಾಗಿ ಹೇಳಿದ್ದಾರೆ. ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯ ರಾಜಕಾರಕ್ಕೆ ಬರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ








