ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರದರ್ಶನ ಬೋರ್ಡ್ ನಲ್ಲಿ ಹಿಂದಿಯನ್ನು ತೆಗೆದು ಹಾಕಲಾಗಿದೆ. ಕೇವಲ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಮಾತ್ರವೇ ವಿಮಾನ ಆಗಮನ, ನಿರ್ಗಮನ ಸೇರಿದಂತೆ ಇತರೆ ಮಾಹಿತಿ ಡಿಸ್ ಪ್ಲೇ ಮಾಡಲಾಗುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸ್ಪ್ಲೇ ಬೋರ್ಡ್ಗಳಿಂದ ಹಿಂದಿಯನ್ನು ತೆಗೆದುಹಾಕಲಾಗಿದೆ. ಈಗ, ವಿಮಾನ ನಿಲ್ದಾಣದ ಎಲ್ಲಾ ಬೋರ್ಡ್ ಗಳು ಕನ್ನಡ ಮತ್ತು ಇಂಗ್ಲಿಷ್ ಅನ್ನು ಮಾತ್ರ ಪ್ರದರ್ಶಿಸುತ್ತವೆ.
ಈ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಜನರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Hindi is removed in digital display boards of Kempegowda International airport in Bengaluru.
Kannada & English.#Kannadigas are resisting Hindi imposition.
This is a really good development ! 👌#StopHindiImposition#TwoLanguagePolicypic.twitter.com/Ll98yTOdbU
— ಚಯ್ತನ್ಯ ಗವ್ಡ (@Ellarakannada) April 12, 2025
ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ವಿಮಾನ ನಿಲ್ದಾಣದ ಪ್ರದರ್ಶನ ಫಲಕವು ಕನ್ನಡ, ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಮಾಹಿತಿಯನ್ನು ಘೋಷಿಸುತ್ತದೆ. ಆದರೆ ಹಿಂದಿಯಲ್ಲಿಲ್ಲ. ಈ ವೀಡಿಯೊ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಶೇರ್ ಆಗಿದೆ. ಇದು ಭಾಷಾ ಸಮಸ್ಯೆಯ ಬಗ್ಗೆ ನೆಟ್ಟಿಗರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಈ ನಿರ್ಧಾರವನ್ನು “ಮೂರ್ಖತನ” ಎಂದು ಟೀಕಿಸಿದರೆ, ಇತರರು ಇಂಗ್ಲಿಷ್ ಅನ್ನು ಉಳಿಸಿಕೊಂಡು ಹಿಂದಿಯನ್ನು ತೆಗೆದುಹಾಕುವ ದ್ವಂದ್ವ ಮಾನದಂಡಗಳನ್ನು ಎತ್ತಿ ತೋರಿಸಿದ್ದಾರೆ ಎಂದಿದ್ದಾರೆ.
ಕನ್ನಡ ಅಥವಾ ಇಂಗ್ಲಿಷ್ ಗೊತ್ತಿಲ್ಲದ ಜನರು ಮತ್ತು ಅವರು ವಿಮಾನ ನಿಲ್ದಾಣವನ್ನು ಹೇಗೆ ನ್ಯಾವಿಗೇಟ್ ಮಾಡುತ್ತಾರೆ ಎಂಬ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಯಿತು.
ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು:
ಇಂಗ್ಲಿಷ್ ಮತ್ತು ಕನ್ನಡ ತಿಳಿದಿರುವವರು ಮಾತ್ರ ಬೆಂಗಳೂರಿಗೆ ಬರುತ್ತಾರೆ ಎಂದು ನೀವು ಭಾವಿಸುತ್ತೀರಾ? ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಇರಬಾರದು ಎಂಬುದು ಅರ್ಥವಾಗಬಹುದಾದರೂ, ಅದು ಖಂಡಿತವಾಗಿಯೂ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಇರಬೇಕು ಎಂದು ಅವರು ಹೇಳಿದರು.
Do you think only those who know English and Kannada visit Bengaluru?
Not having Hindi at metro station is understandable, but it has to be there at airport and railway station.— अमित सिंह 🇮🇳 (@amitsingh2203) April 12, 2025
What's the problem in learning 3 languages?
State (to stick to roots), national (becoz most people already speak hindi), English (global).
I also know Punjabi, hindi and english but would never force any outsider to learn that.— Ankur Garg (@ankur512512) April 12, 2025
But isn’t this just adding inconvenience to the folks who can neither understand English nor Kannada? 🤔
— Jenil (@jenil777007) April 12, 2025
ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರು ದುರ್ಮರಣ, ಹಲವರಿಗೆ ಗಾಯ
ಎ.18ರಿಂದ ಕರಾವಳಿಯಲ್ಲಿ ‘ಸೌಹಾರ್ದ ಬ್ಯಾರಿ ಉತ್ಸವ’; ಉದ್ಯೋಗ ಮೇಳ, ಶೈಕ್ಷಣಿಕ ಕ್ರಾಂತಿಗೂ ಮುನ್ನುಡಿ!