ಬೆಂಗಳೂರು: ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ಬಂದ್ ಮಾಡಲಾಗುವುದು ಅಂಥ ಸಚಿವ ಬೈರತಿ ಸುರೇಶ್ ಅವರು ಇಂದು ಸದನದಲ್ಲಿ ಮಾಹಿತ ನೀಡಿದರು.
ಅವರು ಇಂದು ಸದನದಲ್ಲಿ ಮಾಹಿತಿ ನೀಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಸದನದಲ್ಲಿ ಎಲ್ಲಾ ಶಾಸಕರು ಮಾಲ್ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಇದಲ್ಲದೇ ಸ್ಪೀಕರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾಲ್ ನೌಕರರರ ವಿರುದ್ದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ನಡುವೆ ಭೈರತಿ ಸುರೇಶ್ ಅವರು ಈ ಬಗ್ಗೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು, ಇದಲ್ಲದೇ ಘಟನೆ ಸಂಬಂಧ ಈಗಾಗಲೇ ಬಿಬಿಎಂಪಿ ಆಯಕ್ತರ ಬಳಿ ಚರ್ಚಿಸಲಾಗಿದೆ ಅಂತ ತಿಳಿಸಿದರು.