ಬೆಂಗಳೂರು: ಇಂದು ನಗರದಲ್ಲಿ ಬೆಸ್ಕಾಂ ಇಲಾಖೆಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೆ.17ರ ಇಂದು ಬೆಂಗಳೂರಿನ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಕುರಿತಂತೆ ಬೆಸ್ಕಾಂನಿಂದ ( BESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 17.09.2024 (ಮಂಗಳವಾರ) ಬೆಳಗ್ಗೆ 11:00 ಗಂಟೆಯಿAದ ಮದ್ಯಾಹ್ನ 04:00 ಗಂಟೆಯವರೆಗೆ “220/66/11 ಕೆ.ವಿ ಹೆಬ್ಬಾಳ ಸ್ವೀಕರಣಾ ಕೇಂದ್ರ” ದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
“ಜಯಮಹಲ್ ವಿಸ್ತರಣೆ, ನಂದಿ ದರ‍್ಗ, ದೂರರ‍್ಶನ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ, ಮಾರಪ್ಪ ಗರ‍್ಡನ್, ಚಿನಪ್ಪ ಗರ‍್ಡನ್, ಎನ್.ಡಿ.ರಸ್ತೆ, ಏರ್ ಟೆಲ್, ದೂರರ‍್ಶನ” ಪ್ರದೇಶದಲ್ಲಿ ಕರೆಂಟ್ ಇರೋದಿಲ್ಲ ಎಂದು ತಿಳಿಸಿದೆ.
ಸಾರ್ವಜನಿಕರು ವಿದ್ಯುತ್ ವ್ಯತ್ಯಯಕ್ಕಾಗಿ ಸಹಕರಿಸುವಂತೆ ಮನವಿ ಮಾಡಿದೆ. ಅಲ್ಲದೇ ವಿದ್ಯುತ್ ದೂರಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಗೆ ಸಂಪರ್ಕಿಸವಂತೆ ಕೋರಿದೆ.