ಬೆಂಗಳೂರು: ನಗರದಲ್ಲಿ ಜನರು ಬೆಚ್ಚಿ ಬೀಳಿಸುವಂತೆ ರೌಡಿ ಶೀಟರ್ ಗಳು ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ, ಓಡಿಸಿದಂತ ಘಟನೆ ನಡೆದಿದೆ.
ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಾಜಗೋಪಾಲನಗರದಲ್ಲಿ ನಡು ರಸ್ತೆಯಲ್ಲೇ ರೌಡಿ ಶೀಟರ್ ಗಳು ಯುವಕನೊಬ್ಬನನ್ನು ಬಟ್ಟೆ ಬಿಚ್ಚಿಸಿದ್ದಾರೆ. ಸಂಪೂರ್ಣ ಬೆತ್ತಲೆಗೊಳಿಸಿದಂತ ರೌಡಿ ಶೀಟರ್ ಗಳು ಆತನ ಮುಖ, ದೇಹದಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
ಈ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿರುವಂತ ಕೀಚಕರು, ಬಟ್ಟೆ ಬಿಟ್ಟಿ, ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಿಸಿದ್ದಾರೆ. ರೌಡಿಗಳಿಂದ ಪ್ರಾಣ ಉಳಿಸಿಕೊಳ್ಳೋದಕ್ಕಾಗಿ ಯುವಕ ಬೆತ್ತಲೆಯಾಗಿ ಓಡಿರುವುದಾಗಿ ಹೇಳಲಾಗುತ್ತಿದೆ.
ಇದೀಗ ರೌಡಿಗಳ ಅಟ್ಟಹಾಸದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಡಿಯೋ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೀಚಕ ಕೃತ್ಯ ಎಸಗಿದಂತ ರೌಡಿ ಶೀಟರ್ ಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
BIG NEWS: ನಾಗಮಂಗಲ ಕೋಮುಗಲಭೆ ವೇಳೆ ‘ಪಾಕಿಸ್ತಾನ ಪರ’ ಘೋಷಣೆ?: ತನಿಖೆಗೆ ಆರ್.ಅಶೋಕ್ ಒತ್ತಾಯ
‘ಮಾನವ ಸರಪಳಿ’ಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ.?- ಕೇಂದ್ರ ಸಚಿವ ‘HDK’ ಪ್ರಶ್ನೆ