ಬೆಂಗಳೂರು: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಯುವಕನನ್ನು ತಮಿಳುನಾಡಿನಲ್ಲಿ ಬರ್ಬರವಾಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಗಣಪತಿ ಇಡುವ ವಿಚಾರಕ್ಕಾಗಿ ಜಗಳ ನಡೆದು, ಯುವಕ ರೇವಂತ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
2 ದಿನಗಳ ಹಿಂದೆಯೇ ರೇವಂತ್ ಕೊಲೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕೈಯಲ್ಲಿದ್ದಂತ ಹಚ್ಚೆಯ ಆಧಾರದ ಮೇಲೆ ಕೊಲೆಯಾದಂತ ಯುವಕ ಬೆಂಗಳೂರು ಮೂಲದ ರೇವಂತ್ ಎಂಬುದಾಗಿ ತಮಿಳುನಾಡು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.
ತಮಿಳುನಾಡಿಗೆ ಬೆಂಗಳೂರಿನಿಂದ ಪರಿಚಯಸ್ಥರೊಬ್ಬರು ತಮ್ಮ ಕಾರಿನಲ್ಲಿ ಯುವಕ ರೇವಂತ್ ಕರೆದೊಯ್ದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!
BREAKING : ವಾಯುಪಡೆ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ‘ಎ.ಪಿ ಸಿಂಗ್’ ನೇಮಕ |Air Marshal A.P. Singh