ಬೆಂಗಳೂರು: ನಗರದ ಜನತೆಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಈಗ ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ರಾಜಧಾನಿ ಜನತೆಗೆ ಮತ್ತಷ್ಟು ಹೊರೆಯ ತೂಗುಗತ್ತಿ ಎದುರಾಗಿದೆ. ಏಪ್ರಿಲ್ ನಿಂದ ಕಸಕ್ಕೆ ಶುಲ್ಕ ನೀಡಬೇಕು. ನೀರಿನ ದರ 1 ಪೈಸೆ ಕೂಡ ಏರಿಕೆಯಾಗಲಿದೆ.
ಹೌದು.. ಬೆಂಗಳೂರಲ್ಲಿ ಮೆಟ್ರೋ, ಬಸ್ ಪ್ರಯಾಣದ ಟಿಕೆಟ್ ದರ ಏರಿಕೆಯಿಂದ ತತ್ತರಿಸಿರುವಂತ ಜನತೆಗೆ ಏಪ್ರಿಲ್ ನಿಂದ ಮತ್ತೊಂದು ಹೊರೆ ಹೇರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಏಪ್ರಿಲ್ ನಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದಕ್ಕೂ ಶುಲ್ಕ ವಸೂಲಿ ಜಾರಿಗೊಳಿಸಲು ನಿರ್ಧರಿಸಿದೆ.
ಈ ಹಿಂದೆಯೂ ಬೆಂಗಳೂರಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಆದರೇ ಸಾರ್ವಜನಿಕ ವಲಯದಲ್ಲಿ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಘನ ತ್ಯಾಜ್ಯ ಸೇವಾ ಶುಲ್ಕವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಅದು ಮುನ್ನೆಲೆಗೆ ಬಂದಿದೆ.
ಇನ್ನೂ 2014ರ ನಂತ್ರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಬೆಂಗಳೂರು ಜಲಮಂಡಳಿಯು 7 ರಿಂದ 8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೇ ಅಷ್ಟು ಬೇಡವೆಂದು ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡುವ ಚಿಂತನೆ ನಡೆಸಲಾಗಿದೆ ಎಂಬುದಾಗಿ ಸದನದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ನೀರಿನ ದರ ಪ್ರತಿ ಲೀಟರ್ ಗೆ 1 ಪೈಸೆ ಹೆಚ್ಚಳವಾಗೋದು ಫಿಕ್ಸ್ ಆದಂತೆ ಆಗಿದೆ.
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!