ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಎದ್ದಿದೆ. ನೀರಿನ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಪೋಲು ಮಾಡೋದಕ್ಕೆ ತಡೆಯೋ ಸಲುವಾಗಿ ದಂಡದ ಕಠಿಣ ಕಾನೂನು ಜಾರಿಗೊಳಿಸಲಾಗಿತ್ತು. ಇದನ್ನು ಮೀರಿ, ಪೋಲು ಮಾಡಿದಂತ ಸಿಲಿಕಾನ್ ಸಿಟಿ ಜನತೆಗೆ 1.10 ಲಕ್ಷ ದಂಡವನ್ನು ವಿಧಿಸಿದೆ.
ಬೆಂಗಳೂರಲ್ಲಿ ನೀರು ಪೋಲು ಮಾಡುವುದನ್ನು ತಡೆಗಟ್ಟೋದಕ್ಕಾಗಿ ಕುಡಿಯುವ ನೀರು ಹೊರತಾಗಿ ಬೇರೆ ಯಾವುದೇ ಕೆಲಸಕ್ಕೆ ನೀರು ಬಳಸದಂತೆ ಜಲಮಂಡಳಿ ಎಚ್ಚರಿಕೆ ನೀಡಿತ್ತು. ವಾಹನ ತೊಳೆಯೋದಕ್ಕೆ, ಗಿಡಗಳಿಗೆ ನೀರು ಹಾಕೋದು ಸೇರಿದಂತೆ ವಿವಿಧ ಕಾರಣಗಳಿಗೆ ಅನಗತ್ಯವಾಗಿ ನೀರು ಪೋಲು ಮಾಡದಂತೆ ಖಡಕ್ ಸೂಚನೆ ನೀಡಿತ್ತು.
ಜಲ ಮಂಡಳಿಯ ಎಚ್ಚರಿಕೆಯನ್ನು ಮೀರಿದಂತ ಬೆಂಗಳೂರು ಮಂದಿಯಲ್ಲಿ ಕೆಲವರು ಗಿಡಗಳಿಗೆ ನೀರು ಹಾಕಿದವರು, ರಸ್ತೆಗೆ ಸುರಿದವರು, ವಾಹನ ತೊಳೆಯೋದಕ್ಕೆ ಬಳಸಿದವರಿಗೆ ದಂಡದ ಬಿಸಿಯನ್ನು ಮುಟ್ಟಿಸಿದೆ.
ನೀರು ಪೋಲು ಮಾಡಿದವರಿಗೆ 5000 ದಂಡ ಹಾಕೋದಾಗಿ ಆದೇಶಿಸಿದಂತ ಜಲಮಂಡಳಿಯು, ಅದರಂತೆ ಬೆಂಗಳೂರಲ್ಲಿ ವಿವಿಧ ವಲಯಗಳಲ್ಲಿ ದಂಡದ ರೂಪದಲ್ಲಿ ರೂ.1.10 ಲಕ್ಷವನ್ನು ವಸೂಲಿ ಮಾಡಿದೆ.
ಇದಪ್ಪ ‘ಸಂಚಾರಿ ಪೊಲೀಸ್’ ಕೆಲಸ ಅಂದ್ರೆ.! ಈ ಸುದ್ದಿ ಓದಿ, ನೀವು ‘ಹ್ಯಾಟ್ಸ್ ಆಫ್’ ಹೇಳೋದು ಗ್ಯಾರಂಟಿ