ಬೆಂಗಳೂರು: ಗ್ರಾಹಕರಿಗೆ ತಮ್ಮದೇ ಆದಂತ ಆಯ್ಕೆಯ ಸ್ವಾತಂತ್ರ್ಯವಿದೆ. ಅವರು ಯಾವುದೇ ಅಂಗಡಿಗೆ ಹೋಗಿ ಖರೀದಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೇ ತಮ್ಮ ಅಂಗಡಿಯನ್ನು ಬಿಟ್ಟು ಪಕ್ಕದ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋದ್ರು ಅಂತ ಅಕ್ಕ-ಪಕ್ಕದ ಬಟ್ಟೆ ಅಂಗಡಿ ಮಾಲೀಕರು ಗಲಾಟೆ ಮಾಡಿಕೊಂಡು ಇಬ್ಬರ ಮೇಲೆ 6 ಮಂದಿ ಹಲ್ಲೆ ಮಾಡಿರುವಂತ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಪೇಟೆ ವ್ಯಾಪ್ತಿಯ ಪ್ಲಾಜಾದಲ್ಲಿನ ಬಟ್ಟೆ ಅಂಗಡಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಟ್ಟೆ ಅಂಗಡಿಯ ಮಾಲೀಕರ ನಡುವೆ ಮಾರಾಮಾರಿಯೇ ನಡೆದಿದೆ. ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಗ್ರಾಹಕರೊಬ್ಬರು ಸೀರೆ ಖರೀದಿಸೋದಕ್ಕೆ ಚಿಕ್ಕಪೇಟೆ ಬಳಿಯ ಫ್ಲಾಜಾಗೆ ತೆರಳಿದ್ದರು. ಆದರೇ ಅಲ್ಲಿ ಸರಿಯಿಲ್ಲ ಅನ್ನೋ ಕಾರಣಕ್ಕೆ ಪಕ್ಕದ ಬಟ್ಟೆ ಅಂಗಡಿಗೆ ತೆರಳಿದ್ದಾರೆ. ಈ ವಿಚಾರವಾಗಿಯೇ ಅಕ್ಕ-ಪಕ್ಕದ ಬಟ್ಟೆ ಅಂಗಡಿ ಮಾಲೀಕರ ನಡುವೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೇರಿ ತಂದೆ-ಮಗನ ಮೇಲೆ 6 ಮಂದಿಯಿಂದ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಸೆಪ್ಟೆಂಬರ್.16ರಂದು ನಡೆದಿರುವಂತ ಘಟನೆ ಇದಾಗಿದೆ. ಈ ಸಂಬಂಧ ಎರಡು ಕಡೆಯವರು ಸಿಟಿ ಮಾರ್ಕೆಟ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ: ಹೂಡಿಕೆದಾರರಿಗೆ ಪುಲ್ ಖುಷ್ | Share Market Today