ಬೆಂಗಳೂರು:42 ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್‌ನ ಬಂಧನ ಮಾಡಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ನ್ಯಾಯಾಲಯವು ಹೊರಡಿಸಿರುವ ವಾರೆಂಟ್ ಮತ್ತು ಮೊಕ್ಷಮೇಷನ್ ವ್ಯಕ್ತಿಗಳ ವಿರುದ್ಧ ಕಾರ್ಯ ಪ್ರವೃತ್ತರಾದ ಸಿ.ಸಿ.ಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಓರ್ವ ಬಾಣಸವಾಡಿಯ ರೌಡಿ ಶೀಟರ್‌ನ ಕುರಿತು ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ.ಬಾಣಸವಾಡಿ ಠಾಣೆಯ ರೌಡಿಶೀಟರ್ ‘ಅಜೀಜ್ ಆಸೀಫ್’ ಬಂಧಿತ ಆರೋಪಿಯಾಗಿದ್ದಾನೆ.
ಈ ರೌಡಿ ಟರ್‌ನ ವಿರುದ್ದ 2015 ರಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿರುತ್ತವೆ. ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 07 ಪಕರಣಗಳು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ. ಗೋವಾ ರಾಜ್ಯದಲ್ಲಿಯೂ ಸಹ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಬೇಕಾಗಿರುತ್ತದೆ.
ಸಿ.ಸಿ.ಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಿನಾಂಕ 21/04/2024 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಭಾರತಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಆರ್ಮ್ ಸ್ಟ್ರಾಂಗ್ ರಸ್ತೆಯಲ್ಲಿ ಈ ರೌಡಿ ವ್ಯಕ್ತಿಯನ್ನು ಬೈಕ್ ಸಮೇತ ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನನ್ನು ಶೋಧನೆಗೊಳಪಡಿಸಿದಾಗ ಆತನ ಬಳಿ ಒಂದು ಆಪಲ್ ಐಫೋನ ಒಂದು ಸ್ಯಾಮ್‌ಸಾಂಗ್ ಮೊಬೈಲ್ ಫೋನ್ ಸೇರಿದಂತೆ ವಿವಿಧ ಕಂಪನಿಯ ಒಟ್ಟು 12 ಮೊಬೈಲ್ ಫೋನ್‌ಗಳು, 4 ಚಿನ್ನದ ಕಾಸಿನ ತಾಳಿಗಳು 1 ತಮಿಳು ಸಮಾಜ ಮಾಂಗಲ್ಯ 2 ಚಿನ್ನದ ಗುಂಡುಗಳು, ಕೊಳವೆ ಆಕಾರದ ಗುಂಡುಗಳು ಪತ್ತೆಯಾಗಿರುತ್ತವೆ. ಇವುಗಳನ್ನು ಮುಂದಿನ ಕ್ರಮಕ್ಕಾಗಿ ವರದಿಯೊಂದಿಗೆ ಭಾರತೀನಗರ ಪೊಲೀಸ್ ಠಾಣೆಯ ವರಕ್ಕೆ ನೀಡಿರುತ್ತದೆ.
ಈ ರೌಡಿ ವ್ಯಕ್ತಿಯನ್ನು ಸುದೀರ್ಘವಾಗಿ ವಿಚಾರ ಮಾಡಲಾಗಿ, ಈವನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಮತ್ತು ಮನಃ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದತಿಳಿದುಬಂದಿರುತ್ತದೆ ಹಾಗೂ ಈತನ ವಿರುದ್ಧ ಬಾಕಿ ಇರುವ ಎನ್.ಬಿ.ಡಬ್ಲ್ಯೂ ಪ್ರಕರಣಗಳಲ್ಲಿ ಕಲಂ, 229 (ಎ) ಐಪಿಸಿಅಡಿಯಲ್ಲಿ ಕ್ರಮ ಕೈಗೊಳ್ಳಲು ಬಾಣಸವಾಡಿ ಪೊಲೀಸ್ ಠಾಣೆಗೆ ವರದಿಯನ್ನು ಸಲ್ಲಿಸಲಾಗಿರುತ್ತದೆ.
ಈ ರೌಡಿ ವ್ಯಕ್ತಿಯ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪಕರಣಗಳಲ್ಲಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ-01 ಕಳುವು ಪಕರಣ, ಯಲಹಂಕ ಪೊಲೀಸ್ ಠಾಣೆಯಲ್ಲಿ 01 ಕಳುವು ಪ್ರಕರಣ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ-02 ರಾಬರಿ ಪಕರಣಗಳು ವಸ್ತುತ ತನಿಖಾ ಹಂತದಲ್ಲಿರುತ್ತದೆ. ತುಮಕೂರು ಜಿಲ್ಲೆಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ-01 ದ್ವಿ-ಚಕ್ರ ವಾಹನ ಕಳುವು ಪ್ರಕರಣ ಮತ್ತು ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ-02 ರಾಬರಿ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ.
ಈತನ ವಿರುದ್ಧ ಬೆಂಗಳೂರು ನಗರದ ವಿವಿಧ ಘನ ನ್ಯಾಯಾಲಯಗಳಿಂದ 19 ಪಕರಣಗಳಲ್ಲಿ ಹಾಗೂ ತುಮಕೂರು ಜಿಲ್ಲೆಯ 05 ಪ್ರಕರಣಗಳಲ್ಲಿ ಘನ ನ್ಯಾಯಾಲಯವು ಎನ್.ಬಿ.ಡಬ್ಲೂ ಹೊರಡಿಸಿರುತ್ತದೆ. ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗದ ಮಹಿಳಾ ಸುರಕ್ಷಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.