ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ಪ್ರಾಣಿಗಳ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ 8ನೇ ಮಾರ್ಚ್ 2025 ರಿಂದ 25ನೇ ಮಾರ್ಚ್ 2025 ವರೆಗೆ 18 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ಮಾರ್ಚ್ ತಿಂಗಳಲ್ಲಿ ಅನಧಿಕೃತ ಓ.ಎಫ್.ಸಿ ತೆರವು ಕಾರ್ಯಾಚರಣೆ ಅಭಿಯಾನ
ಬಿಬಿಎಂಪಿ ವ್ಯಾಪ್ತಿಯಲ್ಲಿ “ಅನಧಿಕೃತ ಓ.ಎಫ್.ಸಿ ತೆರವು ಕಾರ್ಯಾಚರಣೆ -ಮಾರ್ಚ್ 2025” ಅಭಿಯಾನವನ್ನು ಹಮ್ಮಿಕೊಂಡಿದ್ದು, ತೆರವು ಕಾರ್ಯಾಚರಣೆನ್ನು ಆರಂಭಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಮಾರ್ಚ್ 2025 ರಿಂದ ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸುವ ಸಂಬಂಧ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿರುತ್ತಾರೆ.
ಅದರಂತೆ, ನಗರದ ಎಲ್ಲಾ 8 ವಲಯಗಳಲ್ಲಿ ಬರುವ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸಬೇಕಿದ್ದು, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್‌ಗಳ ಸಹಾಯಕ ಮತ್ತು ಕಿರಿಯ ಅಭಿಯಂತರರಿಗೆ ನೀಡಲಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಓ.ಎಫ್.ಸಿ ತೆರವು ಕಾರ್ಯಾಚರಣೆಯ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ಸೂಚನೆ ನೀಡಲಾಗಿದೆ.
ವಲಯ ವ್ಯಾಪ್ತಿಯಲ್ಲಿ ಮರ, ವಿದ್ಯುತ್ ಕಂಬಗಳ ಅನಧಿಕೃತ ಕೇಬಲ್ ಅನ್ನು ಅಳವಡಿಸಿದ್ದು, ಭೂಮಿಯ ಮೇಲ್ಮಟ್ಟದಲ್ಲಿ ಕಾಣುವ ರೀತಿಯಲ್ಲಿರುವ ಕಾರಣ ನಗರದ ಸೌಂದರ್ಯ ಕೂಡಾ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲಿ ಓ.ಎಫ್.ಸಿ ಕೇಬಲ್ ತೆರವು ಕಾರ್ಯಾಚರಣೆಯನ್ನು ಮಾರ್ಚ್ ತಿಂಗಳಲ್ಲಿ ಪರಿಣಾಮಕಾರಿಯಾಗಿ ನಡೆಸಲಾಗುವುದು.
ಅನಧಿಕೃತ ಕೇಬಲ್ ತೆರವು ಮಾಡಿದ ಬಳಿಕ ಓ.ಎಫ್.ಸಿ ಸಂಸ್ಥೆಗಳ ನಿರ್ವಹಣಾ ತಂಡಗಳು ಪುನ: ಅನಧಿಕೃತ ಕೇಬಲ್‌ಗಳನ್ನು ಅದೇ ಮಾರ್ಗದಲ್ಲಿ ಅಳವಡಿಸದಂತೆ ನೋಡಿಕೊಳ್ಳಬೇಕು.
2 ವಲಯಗಳಲ್ಲಿ ತೆರವು ಕಾರ್ಯಾಚರಣೆ:
ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು ಅನಧಿಕೃತ ಓ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಲಾಯಿತು.
ಮಹದೇವಪುರ ವಲಯದ ಮಾರತಹಳ್ಳಿ ಮುಖ್ಯ ರಸ್ತೆ, ಕಗ್ಗದಾಸಪುರ, ದೊಡ್ಡಾನೆಕ್ಕುಂದಿ, ಹಾಗೂ ಪೂರ್ವ ವಲಯದಲ್ಲಿ ಹಲಸೂರು ವ್ಯಾಪ್ತಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಇದೇ ರೀತಿ ಎಲ್ಲಾ ವಲಯಗಳಲ್ಲಿಯೂ ಹಂತ-ಹಂತವಾಗಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು.
ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ, ಮುಖ್ಯ ಪರೀಕ್ಷೆಗೆ 1 ಕೋಟಿ, KPSCಯಲ್ಲಿ ರೇಟ್ ಫಿಕ್ಸ್ ಆಗಿದೆ: ಆರ್.ಅಶೋಕ
BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದು, ಪ್ರಿಯಕರ ಆತ್ಮಹತ್ಯೆ