ಬೆಂಗಳೂರು: ನಗರದಲ್ಲಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನಲೆಯಲ್ಲಿ, ಪಣತ್ತೂರು ಬಳಿಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಸಂಚಾರ ಮಾರ್ಗದ ಮೂಲಕ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ವೈಟ್ಫೀಲ್ಡ್ ಸಂಚಾರ ಠಾಣೆಯ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯ ಪಣತ್ತೂರು ರೈಲ್ವೆ ಬ್ರಿಡ್ಜ್ ಬಳಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ಜುಲೈ 9 ರಿಂದ ಜುಲೈ 12ರ ವರೆಗೆ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಅಂತ ತಿಳಿಸಿದ್ದಾರೆ.
ಹೀಗಿದೆ ಪರ್ಯಾಯ ಸಂಚಾರ ಮಾರ್ಗದ ರಸ್ತೆಗಳ ಮಾಹಿತಿ
ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಹೋಗುವ ಸವಾರರು ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್ ಓಕ್ ರಸ್ತೆ ಮೂಲಕ ಬಳಗೆರೆ ಮುಖ್ಯರಸ್ತೆ ಬಳಸಿ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಂಚರಿಸಬಹುದು ಅಂತ ಮಾಹಿತಿ ನೀಡಿದ್ದಾರೆ.
ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ ಕಡೆಗೆ ಹೋಗುವ ವಾಹನಗಳು ಬಳಗೆರೆ ಮುಖ್ಯರಸ್ತೆಯಿಂದ ಸಿಲ್ವರ್ ಓಕ್ ಮೂಲಕ ಗುಂಜೂರು ಪಾಳ್ಯ ರಸ್ತೆ ಬಳಸಿ ಪಣತ್ತೂರು ದಿಣ್ಣೆ ಕಡೆಗೆ ಸಾಗಬೇಕು ಎಂದು ಮಾಹಿತಿ ನೀಡಿದೆ.
BREAKING: ನಾಳೆ ಬೆಳಗ್ಗೆ ‘SSLC ಪರೀಕ್ಷೆ-2’ರ ಫಲಿತಾಂಶ ಪ್ರಕಟ | Karnataka SSLC Exam Results