ಬೆಂಗಳೂರು: ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿ ಪ್ರಕರಣ ಸಂಬಂಧ ಇಂದು ಸಿಸಿಬಿ ವಿಚಾರಣೆಗೆ ತೆಲುಗು ನಟಿ ಹೇಮಾ ಹಾಜರಾಗಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದ್ದಂತ ಸಿಸಿಬಿ ಪೊಲೀಸರು, ಬಂಧನ ಕೂಡ ಮಾಡಿದ್ದರು. ಈ ಬಳಿಕ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು. ಅವರಿಗೆ ನ್ಯಾಯಾಧೀಶರು ಜೂನ್.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಸಲಾಗಿದ್ದಂತ ರೇವ್ ಪಾರ್ಟಿ ಸಂಬಂಧ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಯ ಬಳಿಕ ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಂತ ಅವರನ್ನು ಬೆಂಗಳೂರು ನಗರದ ಆನೇಕಲ್ ನಲ್ಲಿರುವಂತ ಆನೇಕಲ್ ನ 4ನೇ ಸಿವಿಲ್, ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು.
ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣ ಸಂಬಂಧ ಆನೇಕಲ್ ನ 4ನೇ ಸಿವಿಲ್, ಜೆಎಂಫ್ ಸಿ ನ್ಯಾಯಾಲಯದ ನ್ಯಾಯಮೂರ್ತಿ ಸಲ್ಮಾ ಎ ಎಸ್ ಅವರು ವಿಚಾರಣೆ ನಡೆಸಿ, ನಟಿ ಹೇಮಾ ಅವರಿಗೆ ಜೂನ್.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದ್ದಾರೆ.
ರಾಜ್ಯ ಸರ್ಕಾರದ ‘ಲೆಟರ್ ಹೆಡ್’ ದುರ್ಬಳಕೆ ಆರೋಪ : ಡಾ.ಸುಧಾಕರ್ ವಿರುದ್ಧ ಕೇಸ್ ದಾಖಲು
ರಾಜ್ಯ ಸರ್ಕಾರದ ‘ಲೆಟರ್ ಹೆಡ್’ ದುರ್ಬಳಕೆ ಆರೋಪ : ಡಾ.ಸುಧಾಕರ್ ವಿರುದ್ಧ ಕೇಸ್ ದಾಖಲು