ಬೆಂಗಳೂರು: ಜಿಲ್ಲೆಯಲ್ಲಿ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಜುಲೈ.24ರ ಇಂದು ಹಾಗೂ ಜುಲೈ.25ರ ನಾಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಸ್ಕಾಂ(BESCOM), ದಿನಾಂಕ 24.07.2024 (ಬುಧವಾರ) ಹಾಗೂ ದಿನಾಂಕ 25-07-2024ರ (ಗುರುವಾರ) ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ 66/11ಕೆ.ವಿ ಎನ್.ಜಿ.ಇ.ಎಫ್’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಅಂತ ಹೇಳಿದೆ.
ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಎಸ್‌ಎಂವಿಬಿ ರೈಲು ನಿಲ್ದಾಣ, ಇಂದಿರಾನಗರ 1ನೇ ಹಂತ, ಎಚ್‌ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶ ನಗರ, ಪೈ ಲೇಔಟ್, ಬೈರಸಂದ್ರ, ಸಿ.ವಿ. ರಾಮನಗರ, ಎನ್‌ಜಿಇಎಫ್ ಲೇಔಟ್ನ ಪರ‍್ವ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ಹೊಯ್ಸಳನಗರ, ಮುನೇಶ್ವರನಗರ, ಬಿಡಿಎ ಲೇಔಟ್, ಮುನಿನಂಜಪ್ಪ ಲೇಔಟ್ ಕರೆಂಟ್ ಇರೋದಿಲ್ಲ.
ಇನ್ನೂ ದಯಾನಂದ ಲೇಔಟ್, ಕೆಜಿ ಪುರ, ಅಬ್ಬಯ್ಯ ರೆಡ್ಡಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ನಾಗವಾರಪಾಳ್ಯ, ರ‍್ತೂರು ರಸ್ತೆ, ಕೆ.ಆರ್. ರಸ್ತೆ. ಜೋಗುಪಾಳ್ಯ ರ‍್ಟಿಲರಿ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಮಿಲೇನಿಯಾ ಟರ‍್ಸ್, ಹಲಸೂರು ರಸ್ತೆ, ಸಿ.ಎಮ್.ಹೆಚ್ ರಸ್ತೆ, ಇಂದಿರಾನಗರ 2 ನೇ ಹಂತ, ಇಂದಿರಾನಗರ 1 ನೇ ಹಂತ, ಕೃಷ್ಣ ದೇವಸ್ಥಾನ ರಸ್ತೆ, ಡಿಫೆನ್ಸ್ ಕಾಲೋನಿಯಲ್ಲಿ ಪವರ್ ಕಟ್ ಆಗಲಿದೆ.
ಇದಲ್ಲದೇ 515 ಕಾಲೋನಿ, ನ್ಯೂ ಬೈಯಪ್ಪನಹಳ್ಳಿ, ಮೈಚಪಾಳ್ಯ, ಕದಿರೆ ರಸ್ತೆ ಇಂದಿರಾನಗರ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಕೃಷ್ಣ ದೇವಸ್ಥಾನ ರಸ್ತೆ, ಇಂದಿರಾನಗರ ಕ್ಲಬ್, ಕೆಇಬಿ ಕ್ವರ‍್ಟರ‍್ಸ್, ದೂಪನಹಳ್ಳಿ, ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, 12ನೇ ಮುಖ್ಯ, 11ನೇ ಮುಖ್ಯ, ಕೆಪಿಟಿಸಿಎಲ್ ಕ್ವರ‍್ಟರ‍್ಸ್, ಇಎಸ್ಐ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.