ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ, ನವೆಂಬರ್.20, 2024ರ ನಾಳೆ, ನವೆಂಬರ್.21, 2024ರ ನಾಡಿದ್ದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್.20ರ ನಾಳೆಯ ಬುಧವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನಾಳೆ ಈ ಏರಿಯಾಗಳಲ್ಲಿ ಪವರ್ ಕಟ್
ಅರೇಹಳ್ಳಿ, ಇಟ್ಟಮಡು, ಏಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿ.ಜಿ. ಲೇಔಟ್, ಭುವನೇಶ್ವರಿನಗರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಸ್ರ್ಟಿಯಲ್ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ವಿಕ್ರಮ್ ನಗರ, ಯೆಲಚೇನಹಳ್ಳಿ, ರಾಮಾಂಜನೇಯ ನಗರ, ನಂದ ಕುಮಾರ್ ಲೇಔಟ್, ಉತ್ತರಹಳ್ಳಿ ಮೇನ್ ರೋಡ್, ಉದಯ ನಗರ, ಗೌಡನ ಪಾಳ್ಯ, ಟೆಲಿಕಾಂ ಲೇಔಟ್, ಮುನೇಶ್ವರ ನಗರ, ಚಿಕ್ಕಲಸಂದ್ರ ವಿಲೇಜ್, ಕದಿರೇನಹಳ್ಳಿ, ಅಬ್ಬಯ್ಯ ನಾಯ್ಡು ಸ್ಟುಡಿಯೋ ಸುತ್ತಮುತ್ತಲ ಪ್ರದೇಶ, ನಾಯ್ಡು ಲೇಔಟ್, ಎಜಿಎಸ್ ಲೇಔಟ್, ಹನುಮ ಆದಶð ಅಪಾಟ್ðಮೆಂಟ್ 1 & 2, ಹಿಲ್ಸ್ ಲೇಔಟ್, ಕಾಮಾಕ್ಯ ಲೇಔಟ್, ಹೊಸಕೆರೆಹಳ್ಳಿ, ಟಾಟಾ ಪ್ರಮೋಟ್, ಸಪ್ತಗಿರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಕೆಪಿಟಿಸಿಎಲ್ ವತಿಯಿಂದ ಕಟ್ಟಿಗೇನಹಳ್ಳಿ ಸಬ್ ಸ್ಟೇಷನ್ ನಲ್ಲಿ ತುರ್ತ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೆಬ್ಬಾಳ ವಿಭಾಗದ ಸಿ-7 ಉಪವಿಭಾಗದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 20.11.2024 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:30 ಗಂಟೆವರೆಗೆ ಎಂಬಸ್ಸಿ ಮತ್ತು ಉತ್ತರ ದ್ವಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.
ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 21 ರ ಗುರುವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬಿಟಿಎಮ್ ಮೊದಲನೇ ಹಂತ, ಮೆಜಸ್ಟಿಕ್ ಅಪಾಟðಮೆಂಟ್, ಗುರಪ್ಪನಪಾಳ್ಯ, ಅ್ಯಾಕ್ಸಾ, ಜೈ ಬೀಮಾ ನಗರ, ಹಳೆ ಮಡಿವಾಳ, ಬಿಟಿಎಮ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.