ಬೆಂಗಳೂರು: ನಾಳೆ ನಗರದಲ್ಲಿ ಬೆಸ್ಕಾಂ ಇಲಾಖೆಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೆ.25ರ ನಾಳೆ ಬೆಂಗಳೂರಿನ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ದಿನಾಂಕ 25.09.2024 (ಬುಧುವಾರ) ಬೆಳಿಗ್ಗೆ 11;00 ಗಂಟೆಯಿAದ ಮಧ್ಯಾಹ್ನ 03:30 ಗಂಟೆಯವರೆಗೆ 66/11ಕೆವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
“ಹಳೆಹಳ್ಳಿ, ಮಾರ್ಗೊಂಡಣ ಹಳ್ಳಿ, ಗವಿಗುಡಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಅಥಮ ವಿದ್ಯಾನಗರ, ಕೆ.ಆರ್.ಸಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡ ರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್ಮೆಂಟ್, ಮತ್ತು ಸುತ್ತಮುತ್ತಲಿನ ಪ್ರದೇಶ.”
ವಿದ್ಯುತ್ ದೂರಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಗೆ ಸಂಪರ್ಕಿಸುವುದು.