Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ ತೈಲ ಖರೀದಿ ಪುನರ್ವಿಮರ್ಶಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ : ರಷ್ಯಾದ ವಿದೇಶಾಂಗ ಸಚಿವ

04/02/2026 8:12 PM

BREAKING : ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಟಿಟಿಪಿ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಸಾವು

04/02/2026 8:04 PM

‘ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ’ : ಬೋಯಿಂಗ್ 787 ಫ್ಲೀಟ್’ನ ಇಂಧನ ನಿಯಂತ್ರಣ ಸ್ವಿಚ್ ಮರು ಪರಿಶೀಲನೆ ಬಳಿಕ ಏರ್ ಇಂಡಿಯಾ ಸ್ಪಷ್ಟನೆ

04/02/2026 7:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಲ್ಲಿ ಹಣ ದುರುಪಯೋಗ: ಅಧಿಕಾರಿಗಳು ಸಸ್ಪೆಂಡ್
KARNATAKA

ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಲ್ಲಿ ಹಣ ದುರುಪಯೋಗ: ಅಧಿಕಾರಿಗಳು ಸಸ್ಪೆಂಡ್

By kannadanewsnow0916/10/2024 6:32 PM

ಬೆಂಗಳೂರು: ಸಾಮಾಜಿಕ ಜಾಲತಾಗಳಲ್ಲಿ ಹಂಚಿಗೊಂಡ ವೀಡಿಯೋದಲ್ಲಿ, ಕೆಲ ಇಲಾಖಾ ಅಧಿಕಾರಿಗಳು ದೇವಾಲಯಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವ ಸಂಬಂದ ಬಂದ ದೂರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ತ್ವರಿತಗತಿಯಲ್ಲಿ‌ ಕಠಿಣ ಕ್ರಮ ವಹಿಸಿದ್ದಾರೆ. ಬೆಂಗಳೂರಿನ ಜಯನಗರದ ವಿನಾಯಕ ದೇವಾಲಯದ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಆಡಿಯೋ ಸಂಭಾಷಣೆಯಲ್ಲಿ, ಬೆಂಗಳೂರು ಜಯನಗರದ ಶ್ರೀ ವಿನಾಯಕ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎನ್. ಮಂಜುಳ ಅವರ ಹೆಸರು ಪ್ರಸ್ತಾಪವಾಗಿದೆ. ಅವರು ಸೋಮಶೇಖರ್ ಅವರ ಸೂಚನೆ ಮೇರೆಗೆ, ದೇವಾಲಯದಿಂದ ₹25,000 ಗಳನ್ನು ದೇವಾಲಯದ ಸ್ವಚ್ಛತೆ ಕಾರ್ಯ, ಬೀಗದ ಕೀಲಿ ರಿಪೇರಿ ಮತ್ತು ಹಬ್ಬದ ಖರೀದಿಗಳ ಹೆಸರಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಇಲಾಖಾ ವರ್ತನೆ ಮತ್ತು ಹಣಕಾಸು ವಹಿವಾಟನ್ನು ಕ್ರಮಬದ್ಧವಾಗಿ ನಿರ್ವಹಿಸದ ಕಾರಣ ಟಿ.ಎನ್. ಮಂಜುಳ ಮತ್ತು ಗಿರೀಶ್ ಅವರನ್ನು ಆಯುಕ್ತರು ಮುಜರಾಯಿ ಇಲಾಖೆರವರಾದ ಡಾ.ವೆಂಕಟೇಶ್ ಭಾಆಸೇ, ಅವರು ಸಾರಿಗೆ ಹಾಗೂ ಮುಜರಾಯಿ ಸಚಿವರ ಆದೇಶದಂತೆ ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಮತ್ತು 2002ರ ನಿಯಮಗಳು 01.05.2003ರಿಂದ ಜಾರಿಗೆ ಬಂದಿದ್ದು, ಅಧಿಸೂಚಿತ ದೇವಾಲಯಗಳ ಆರ್ಥಿಕ ವಹಿವಾಟು ಪಾರದರ್ಶಕವಾಗಿರಬೇಕು. ಆದರೆ ಕೆಲವು ಅಧಿಕಾರಿಗಳು ದೇವಾಲಯದ ಹಣವನ್ನು ನಕಲಿ ವೋಚರ್ಸ್ಗಗಳ ಮೂಲಕ ದುರುಪಯೋಗ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ.

ದೇವಾಲಯದ ಯಾವುದೇ ಹಣವನ್ನು ನೌಕರರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಚೆಕ್ ಮೂಲಕ ವಿತ್ ಡ್ರಾ ಮಾಡಲು ಅವಕಾಶವಿಲ್ಲ. ಖರ್ಚುಗಳನ್ನು ಕಾನೂನುಬದ್ಧ ರೀತಿಯಲ್ಲಿ ನಡೆಸಲು ರಾಜ್ಯದ ಆರ್ಥಿಕ ಸಂಹಿತೆ ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಈ ಪ್ರಕ್ರಿಯೆ ನಿಯಮಬದ್ಧವಾಗಿದ್ದರೂ, ಕೆಲವರು ಹಣ ದುರುಪಯೋಗ ಮಾಡುವ ದೂರುಗಳು ಕೇಳಿ ಬರುತ್ತಿವೆ, ಇದರಿಂದ ಸಾರ್ವಜನಿಕ ವಲಯದಲ್ಲಿ ಇಲಾಖೆ ಬಗ್ಗೆ ಅಪಪ್ರಚಾರವಾಗುತ್ತದೆ. ಇದು ಅಕ್ಷಮ್ಯ.

ದೇವಾಲಯಗಳು ಆಧ್ಯಾತ್ಮಿಕ ಕೇಂದ್ರಗಳು, ಅಧಿಕಾರಿಗಳು‌‌ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ನೀಡಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ, ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದು, ಮಾನ್ಯ ಸಚಿವರು ದೇವಸ್ಥಾನಗಳ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗವಾಗಲು ಬಿಡುವುದಿಲ್ಲ, ಬೇರೆ ಅನ್ಯ ಕಾರ್ಯಗಳಿಗೆ ಬಳಸುವುದೂ ಇಲ್ಲ‌ ಎಂಬುದನ್ನು ಪುನರುಚ್ಚಿಸಿದ್ದಾರೆ. ಈ‌‌ ಬಗ್ಗೆ ಇಂದು ಸುತ್ತೋಲೆ ಕೂಡ ಮುಜರಾಯಿ‌ ಇಲಾಖೆಯಿಂದ ಹೊರಡಿಸಲಾಗಿದೆ‌.

ಹಾಗೂ ಮುಜರಾಯಿ ಕೇಂದ್ರ ಕಛೇರಿಯಲ್ಲಿರುವ ಕೆಲವು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಸಹ ಪರಾಮರ್ಶಿಸಿ ವರದಿ ನೀಡಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ .ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ಮರ: ಆಟೋ ಜಖಂ, ಚಾಲಕ ಪ್ರಾಣಾಪಾಯದಿಂದ ಪಾರು

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾ ಗೌಡ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ

Share. Facebook Twitter LinkedIn WhatsApp Email

Related Posts

ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ ಆರಂಭ

04/02/2026 7:28 PM1 Min Read

BIG NEWS : ವಿಧಾನಸಭೆಯಲ್ಲಿ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರ

04/02/2026 7:24 PM1 Min Read

BREAKING : ಫೆ.9 ರಿಂದ ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಜಾರಿ | Metro Ticket Prize Hike

04/02/2026 7:04 PM1 Min Read
Recent News

ಭಾರತ ತೈಲ ಖರೀದಿ ಪುನರ್ವಿಮರ್ಶಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ : ರಷ್ಯಾದ ವಿದೇಶಾಂಗ ಸಚಿವ

04/02/2026 8:12 PM

BREAKING : ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಟಿಟಿಪಿ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಸಾವು

04/02/2026 8:04 PM

‘ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ’ : ಬೋಯಿಂಗ್ 787 ಫ್ಲೀಟ್’ನ ಇಂಧನ ನಿಯಂತ್ರಣ ಸ್ವಿಚ್ ಮರು ಪರಿಶೀಲನೆ ಬಳಿಕ ಏರ್ ಇಂಡಿಯಾ ಸ್ಪಷ್ಟನೆ

04/02/2026 7:54 PM

ಕರ್ನಾಟಕವನ್ನು ರಕ್ಷಣೆ ಮಾಡಿ ಎಂದು ಕೈಮುಗಿದು ಬೇಡುತ್ತೇನೆ : ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ HD ದೇವೇಗೌಡ ಗದ್ಗದಿತ!

04/02/2026 7:46 PM
State News
KARNATAKA

ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ ಆರಂಭ

By kannadanewsnow0504/02/2026 7:28 PM KARNATAKA 1 Min Read

ಬಳ್ಳಾರಿ : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ…

BIG NEWS : ವಿಧಾನಸಭೆಯಲ್ಲಿ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರ

04/02/2026 7:24 PM

BREAKING : ಫೆ.9 ರಿಂದ ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಜಾರಿ | Metro Ticket Prize Hike

04/02/2026 7:04 PM

ವಸಂತ್ ನಾಯಕ ಹತ್ಯೆ ಪ್ರಕರಣ : ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

04/02/2026 6:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.