ಬೆಂಗಳೂರು: ಇನ್ನೇನ್ನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಬಾರಿ ಹೊಸ ವರ್ಷ ಸ್ವಾಗತ ಮಾಡಲು ಜನರು ಕಾಯುತ್ತಿದ್ದಾರೆ. ನಗರದಲ್ಲಿ ಮೋಜು ಮಸ್ತಿಯಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

BIGG NEWS: ಕಾಂಗ್ರೆಸ್-‌ ಬಿಜೆಪಿ ನಡುವೆ ದೇಗುಲ- ದರ್ಗಾ ದಂಗಲ್; ಟ್ವೀಟ್‌ ಮೂಲಕ ಸಿದ್ದರಾಮಯ್ಯಗೆ ಬಿಜೆಪಿ ವಾಗ್ದಾಳಿ

ಅದಲ್ಲದೆ ಹೊಸ ವರ್ಷ ಅಂದರೆ ಹೋಟೆಲ್‌ , ಬಾರ್‌ ಕ್ಲಬ್ ಗಳಿಗೆ ಹೋಗುವುದು ಸಾಮಾನ್ಯ. ಅಲ್ಲಿ ಕುಡಿದು ಮೋಜು-ಮಸ್ತಿ ಮಾಡುತ್ತಾರೆ. ಹೀಗೆ ಕುಡಿದವರು ವಾಹನ ಚಲಾಯಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಹೊಸ ವರ್ಷದಂದು ಪೊಲೀಸರು ಫುಲ್ ಅಲರ್ಟ್ ಆಗಿರಲಿದ್ದು, ಡ್ರಂಕ್ ಆ್ಯಂಡ್ ಡ್ರೈವ್ ಮಾಡಿದರೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಯಾಕಂದರೆ ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ ನಡೆಸಲಿದ್ದಾರೆ.

BIGG NEWS: ಕಾಂಗ್ರೆಸ್-‌ ಬಿಜೆಪಿ ನಡುವೆ ದೇಗುಲ- ದರ್ಗಾ ದಂಗಲ್; ಟ್ವೀಟ್‌ ಮೂಲಕ ಸಿದ್ದರಾಮಯ್ಯಗೆ ಬಿಜೆಪಿ ವಾಗ್ದಾಳಿ

ಜನವರಿ 1 ರತನಕ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ. ಇತ್ತೀಚೆಗೆ ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದ್ದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವಲ್ಲಿ ಟ್ರಾಫಿಕ್ ಪೊಲೀಸರ ಈ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

 

 

Share.
Exit mobile version