ಬೆಂಗಳೂರು: ನಗರದಲ್ಲಿ ಅಪಾಯಕಾರಿಯಾಗಿ ಬೈಕ್ ವೀಲ್ಹಿಂಗ್ ಮಾಡುತ್ತ, ಕೈಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತಾ ಸಾರ್ವಜನಿಕರನ್ನು ಭಯ ಹುಟ್ಟಿಸಿದಂತ ಸವಾರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳು ಸಂಚಾರ ಪಶ್ಚಿಮ ವಿಭಾಗದ ಚೌಡೇಶ್ವರಿ ನಗರದ ಬಸ್ ನಿಲ್ದಾಣ, ಔಟರ್ ರಿಂಗ್ ರೋಡ್ ನಲ್ಲಿ ಸ್ಕೂಟರ್ ನಲ್ಲಿ ವೀಲ್ಹಿಂಗ್ ಮಾಡಿದ್ದರು. ಜೊತೆಗೆ ಕೈಯಲ್ಲಿ ಲಾಂಗ್ ಹಿಡಿದು ಝಳಪಿಸಿ, ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ದರು.
ಇದೀಗ ಇಬ್ಬರು ಬೈಕ್ ಸವಾರರನ್ನು ಖಚಿತ ಮಾಹಿತಿ ಮೇರೆ ದಾಳಿ ಮಾಡಿ, ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಇಂದ ವೀಲ್ಹಿಂಗ್ ಮಾಡುತ್ತಿದ್ದಂತ ಬೈಕ್, ಲಾಂಗ್ ವಶಕ್ಕೆ ಪಡೆಯಲಾಗಿದೆ. ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.