ಬೆಂಗಳೂರು: ನಗರದಲ್ಲಿ ಮತ್ತೊಂದು ಕೀಚಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬ್ಯಾಡ್ಮಿಂಟನ್ ಕೋಟ್ ಒಬ್ಬರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ವರದಿಯಾಗಿದೆ.
ಬೆಂಗಳೂರಿನ ಹುಳಿಮಾವು ಬಳಿಯಲ್ಲಿರುವಂತ ಬ್ಯಾಡ್ಮಿಂಟನ್ ಕೇಂದ್ರದಲ್ಲಿ 16 ವರ್ಷದ ಬಾಲಕಿಯೊಬ್ಬಳು ಬ್ಯಾಡ್ಮಿಂಟನ್ ತರಬೇತಿಯನ್ನು ಪಡೆಯುತ್ತಿದ್ದರು. ಈ ಬಾಲಕಿಗೆ 26 ವರ್ಷದ ತಮಿಳುನಾಡು ಮೂಲಕ ಸುರೇಶ್ ಬಾಲಾಜಿ ಎಂಬಾತ ಕೋಚ್ ನೀಡುತ್ತಿದ್ದನು.
ಕೋಚಿಂಗ್ ನೀಡುವ ನೆಪದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋದಾಗಿ ತಿಳಿದು ಬಂದಿದೆ. ಆಗಾಗ ಬಾಲಕಿಯನ್ನು ಮನೆಗೂ ಕೋಚ್ ಸುರೇಶ್ ಕರೆದೊಯ್ಯುತ್ತಿದ್ದನು ಎನ್ನಲಾಗುತ್ತಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದಹಾಗೇ ಬಾಲಕಿ ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ತರಬೇತಿಯನ್ನು ಅಪ್ರಾಪ್ತ ಬಾಲಕಿ ಪಡೆಯುತ್ತಿದ್ದಳು. ರಜೆಗೆ ಅಜ್ಜಿಯ ಮನೆಗೆ ತೆರಳಿದ್ದಾಗಲೂ ಕೋಚ್ ಸುರೇಶ್ ಬಾಲಾಜಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಅಜ್ಜಿಯ ಮೊಬೈಲ್ ನಿಂದ ಕೋಚ್ ಸುರೇಶ್ ಗೆ ಅಪ್ರಾಪ್ತ ಬಾಲಕಿ ನಗ್ನ ಪೋಟೋ, ವೀಡಿಯೋ ಶೇರ್ ಮಾಡಿದ್ದಾಳೆ. ಈ ವಿಷಯ ತಿಳಿದಂತ ಅಜ್ಜಿ ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋದು, ಯಾರಿಗಾದರೂ ಹೇಳಿದ್ರೇ ಕೊಲೆ ಮಾಡೋದಾಗಿ ಬೆದರಿಕೆ ಹಾಕಿರೋ ವಿಷಯ ಬಾಯಿ ಬಿಟ್ಟಿದ್ದಾಳೆ. ಈ ಹಿನ್ನಲೆಯಲ್ಲಿ ಪೋಷಕರು ಹುಳಿಮಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಸುರೇಶ್ ಬಾಲಾಜಿ ಬಂಧಿಸಿದ್ದಾರೆ.
ಏ. 15 ರಿಂದ `ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿ ಸ್ಪರ್ಧೆ’ : ಆನ್‍ಲೈನ್‍ನಲ್ಲಿ ನೊಂದಣಿಗೆ ಸೂಚನೆ
SHOCKING : ಬೆಂಗಳೂರಿನಲ್ಲಿ ಹೇಯ ಕೃತ್ಯ : ಯುವತಿಯ ಖಾಸಗಿ ಭಾಗ ಸ್ಪರ್ಶಿಸಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕರು.!