ಬೆಂಗಳೂರು: ನಗರದಲ್ಲಿ ಹಸಿರು ಹಾಗೂ ಪಿಂಕ್ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಗೊಂಡಿದೆ. ಈ ಬಳಿಕ ಹಳದಿ ಮಾರ್ಗದಲ್ಲೂ ಸಂಚಾರ ಆರಂಭಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಜನವರಿ.6ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ ಅನ್ನೋ ಮಾಹಿತಿ ವೈರಲ್ ಆಗಿತ್ತು. ಈ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ ಏನು ಅಂತ ಮುಂದೆ ಓದಿ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಇದೊಂದು ಸುಳ್ಳು ಸುದ್ದಿ ಅಂತ ಸ್ಪಷ್ಟ ಪಡಿಸಿದೆ. ಅಲ್ಲದೇ ಜನವರಿ.6ರಿಂದ ಹಳದಿ ಮಾರ್ಗದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚಾರ ಆರಂಭಗೊಳ್ಳೋದಿಲ್ಲ ಅಂತ ತಿಳಿಸಿದೆ.
ಬಿಎಂಆರ್ ಸಿಎಲ್ ಹೇಳಿದ್ದೇನು.?
ಜನವರಿ 6, 2025 ರಂದು ಹಳದಿ ಮಾರ್ಗವಾದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾರ್ವಜನಿಕರ ಸೇವೆಗೆ ಮೆಟ್ರೋ ರೈಲು ಆರಂಭಗೊಳ್ಳಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಮಾಹಿತಿಯಾಗಿದೆ. ನಿಜವಾದ ಸಂಗತಿಯೇನೆಂದರೆ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಕೋಲ್ಕತ್ತಾದ ಟಿಟಗಾರ್ ರೆೈಲು ಸಂಸ್ಥೆಯ ಕಾರ್ಖಾನೆಯಲ್ಲಿ ಮೊದಲ ರೈಲು ಸೆಟ್ ದಿನಾಂಕ 6 ಜನವರಿ 2025 ರಂದು ಅನಾವರಣಗೊಳ್ಳುತ್ತಿದೆ ಎಂಬುದಾಗಿ ತಿಳಿಸಿದೆ.
ಜನವರಿ 6, 2025 ರಂದು ಹಳದಿ ಮಾರ್ಗವಾದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾರ್ವಜನಿಕರ ಸೇವೆಗೆ ಮೆಟ್ರೋ ರೈಲು ಆರಂಭಗೊಳ್ಳಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಮಾಹಿತಿಯಾಗಿದೆ. ನಿಜವಾದ ಸಂಗತಿಯೇನೆಂದರೆ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಕೋಲ್ಕತ್ತಾದ ಟಿಟಗಾರ್ ರೆೈಲು ಸಂಸ್ಥೆಯ… pic.twitter.com/QJ1PHz1ofu
— ನಮ್ಮ ಮೆಟ್ರೋ (@OfficialBMRCL) January 3, 2025
ಮಾಸಲು ಬಟ್ಟೆಯ ಬಡವರನ್ನು ನಿರ್ಲಕ್ಷ್ಯಿಸುವುದು ಮಾನಸಿಕ ಗುಲಾಮಗಿರಿ ಧ್ಯೋತಕ, ಇದನ್ನು ಬಿಡಿ: ಸಿದ್ಧರಾಮಯ್ಯ
ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿ ಅನುಸಾರ ಗುರುತಿಸಲು ತುಷಾರ್ ಗಿರಿನಾಥ್ ಸೂಚನೆ
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!