ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಯನ್ನು ನಾಳೆ ಕರಾಳ ದಿನಾಚರಣೆ ಅಂತ ವಾಟಾಳ್ ನಾಗರಾಜ್ ಆಚರಣೆ ಮಾಡಲಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಮಾಹಿತಿ ನೀಡಿದ್ದು, ದಿನಾಂಕ 07-06-2025ರ ಶನಿವಾರದಂದು ಮಧ್ಯಾಹ್ನ 12.30ಕ್ಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಮಾಯಕರ ಸಾವಾಗಿದೆ. ಈ ಸಾವಿಗೆ ಕಾರಣ ಯಾರು? ಈ ಸಾವು ನ್ಯಾಯವೇ ಅಂತ ಪ್ರಶ್ನಿಸಿದ್ದಾರೆ.
ಇದನ್ನು ನಾವು ಬಹಳ ಗಂಭೀರವಾಗಿ ರಾಜಕೀಯ ರಹಿತವಾಗಿ ಚಿಂತನೆ ಮಾಡಬೇಕಾಗಿದೆ. ತಪ್ಪಿತಸ್ಥರು ಯಾರೇ ಇರಲಿ ಅದು ಅಪರಾಧಿ ಸ್ಥಾನದಲ್ಲಿ ನಿಲ್ಲಲೇಬೇಕು. ಬಹಳ ಮುಖ್ಯವಾಗಿ ಆರ್ ಸಿ ಬಿ ವಿಜಯೋತ್ಸವ ಮೆರವಣಿಗೆ ಸಮಾರಂಭ ನಡೆಸಲು ತೀರ್ಮಾನಿಸಿದವರು ಯಾರು? ಇದು ಬಹಣ ಮುಖ್ಯ. ನಮ್ಮ ರಾಜ್ಯದ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿರುವುದು ಸತ್ಯ. ಈ ಸಮಾರಂಭ ವ್ಯವಸ್ಥೆಗೆ ಯಾರು ಅನುಮತಿ ನೀಡಿದ್ದು, ಯಾರಿಗಾಗಿ ಈ ಸಮಾರಂಭ ಆಯೋಜಿಸಲಾಗಿತ್ತು. 11 ಜನರ ಸಾವಿಗೆ ಯಾರು ಕಾರಣ ಎಂಬುದಾಗಿ ಕಿಡಿಕಾರಿದ್ದಾರೆ.
ರಾಜ್ಯದ ವೀರಶೈವೆ ಲಿಂಗಾಯಿತ ಸಮುದಾಯದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ