Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಕೃಷಿಮೇಳ 2024 ಸಮಾರೋಪ: ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ
KARNATAKA

ಬೆಂಗಳೂರಿನ ಕೃಷಿಮೇಳ 2024 ಸಮಾರೋಪ: ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ

By kannadanewsnow0917/11/2024 8:37 PM

ಬೆಂಗಳೂರು : ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿಮೇಳ 2024ರ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂದು ನವೆಂಬರ್ 17 ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು ಹಾಗೂ ರಾಜ್ಯ ಮಟ್ಟದ ಡಾ| ಎಂ. ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ| ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ|| ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಸದ ಡಾ: ಶಾಲಿನಿ ರಜನೀಶ್ ಅವರು ಮಾತನಾಡಿ ಕೃಷಿ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಈ ಬೃಹತ್ ಕೃಷಿಮೇಳ ದೇಶದಲ್ಲಿ ಮಾದರಿಯಾಗಿದೆ. ರೈತರು ಈ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ನೋಡಿದ ಕೃಷಿ ತಾಂತ್ರಿಕತೆಗಳು, ತಳಿಗಳ ಬಗ್ಗೆ ಇನ್ನು ಹತ್ತು ರೈತರಿಗೆ ಮಾಹಿತಿಯನ್ನು ರವಾನಿಸಿದಾಗ ಮಾತ್ರ ಈ ಮೇಳಕ್ಕೆ ಒಂದು ಅರ್ಥಸಿಗುತ್ತದೆ ಎಂದು ಹೇಳಿದರು.

ಈ ಮೇಳದಲ್ಲಿ ಕೃಷಿಯಲ್ಲಿ ನಿರತರಾದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದು ಅಭಿನಂದನಾರ್ಹ. ನಮ್ಮ ಯುವಜನತೆ ಡಿಜಿಟಲ್ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಆಳವಡಿಸಿಕೊಂಡು ಕೃಷಿಯಲ್ಲಿ ಕ್ರಾಂತಿಯನ್ನು ತರಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ಮಾಹಿತಿ, ತಂತ್ರಜ್ಞಾನದ ಬಳಕೆಯಿಂದಾಗಿ ಇತರೆ ದೇಶಗಳು ಸಹ ನಮ್ಮ ಆಧುನಿಕ ಕೃಷಿಯನ್ನು ಹೊಗಳುವಂತಾಗಿದೆ ಎಂದರು.

ಈ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ತಂತ್ರಜ್ಞಾನ, ಪರಿಕರಗಳು ಮತ್ತು ರುಚಿಯಾದ ಹಳ್ಳಿಯ ಸೊಗಡಿನ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ವಿಷಯ. ಈ ನಾಲ್ಕು ದಿನಗಳ ಬೃಹತ್ ಮೇಳದಲ್ಲಿ ಆಯೋಜಿಸಿರುವ ಕೃಷಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬರನ್ನು ಅಭಿನಂದಿಸಿದರು

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ 4 ದಿನಗಳ ಕೃಷಿಮೇಳ-2024 ಅಭೂತ ಪೂರ್ವಯಶಸ್ಸಿಗೆ ಸಾಕ್ಷಿಯಾಗಿದೆ ಎಂದು‌ ತಿಳಿಸಿದರು.

ಡಿಜಿಟಲ್ ಕೃಷಿಯು ಭವಿಷ್ಯದ ಕೃಷಿಗೆ ಮುನ್ನುಡಿ, ಡಿಜಿಟಲ್ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ, ಡೋನ್‌ಗಳ ಅಳವಡಿಕೆ, ಹವಾಮಾನ ಆಧಾರಿತ ಕೃಷಿಯು ಆಹಾರ ಉತ್ಪದನೆಯನ್ನು ಹೆಚ್ಚಿಸುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡಬಲ್ಲದು. ಮುಂದಿನ ದಿನಗಳಲ್ಲಿ ಡಿಜಿಟಲ್ ಕೃಷಿಯನ್ನು ಕೃಷಿ ಯಂತ್ರದಾರೆಗೆ ಅಳವಡಿಸಲು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಮಾದ್ಯಮ ಮಿತ್ರರು, ರೈತರು ಮತ್ತು ಸಾರ್ವಜನಿಕರು ಸಹಕಾರದಿಂದ ಈ ಕೃಷಿಮೇಳ ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ: ಕೆ.ಸಿ. ನಾರಾಯಣಸ್ವಾಮಿ, ಕುಲಸಚಿವರು, ಡಾ: ಹೆಚ್.ಎಸ್. ಶಿವರಾಮು ಸಂಶೋಧನಾ ನಿರ್ದೇಶಕರು, ಡಾ: ವೈ.ಎನ್. ಶಿವಲಿಂಗಯ್ಯ, ವಿಸ್ತರಣಾ ನಿರ್ದೇಶಕರು ಮತ್ತು ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ: ಟಿಕೆ. ಪ್ರಭಾಕರ ಶೆಟ್ಟಿ, ಹೆಚ್.ಎಲ್. ಹರೀಶ್, ಬಿ.ಎಸ್.ಉಲ್ಲಾಸ್, ಎನ್. ದಿನೇಶ್ ಮತ್ತು ಡಾ: ಎಂ. ಚಂದ್ರೇಗೌಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

‘ಸ್ವ ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಉಚಿತ ‘ದ್ವಿಚಕ್ರ ವಾಹನ ರಿಪೇರಿ ತರಬೇತಿ’ಗೆ ಅರ್ಜಿ ಆಹ್ವಾನ

BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಹೆಚ್ಚು ನೀರು ಕುಡಿಯುವುದು ಅಪಾಯಕಾರಿ.! ಮಾರಣಾಂತಿಕವಾಗಬಹುದು: ವೈದ್ಯರು | Drinking Water

Share. Facebook Twitter LinkedIn WhatsApp Email

Related Posts

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

21/03/2026 9:16 PM1 Min Read

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM2 Mins Read

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM2 Mins Read
Recent News

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM

ಡೇಟಿಂಗ್ ಲೋಕದ ಹೊಸ ವಿಲನ್ ‘ಘೋಸ್ಟ್‌ಲೈಟಿಂಗ್’: ಇದು ‘ಘೋಸ್ಟಿಂಗ್‌’ಗಿಂತಲೂ ಹೆಚ್ಚು ಅಪಾಯಕಾರಿ ಏಕೆ?

21/03/2026 9:46 PM
State News
KARNATAKA

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

By kannadanewsnow0921/03/2026 9:16 PM KARNATAKA 1 Min Read

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯವರ ಫ್ಲೆಕ್ಸ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಚಾಮರಾಜನಗರದಲ್ಲೂ ಅಂತಹದ್ದೇ ಘಟನೆ…

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM

ಚಾಮರಾಜನಗರ: ಪ್ಲೆಕ್ಸ್ ಗಳಲ್ಲಿ ಪ್ರಚಾರಕ್ಕಿಳಿದ್ರಾ ಜಿಲ್ಲಾ ಮಟ್ಟದ ಅಧಿಕಾರಿಗಳು.!?

21/03/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.