ಬೆಂಗಳೂರು: ನಗರದಲ್ಲಿ ಆಗಸ್ಟ್.1ರಿಂದ 3ರವರೆಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024 ಆಯೋಜಿಸಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಆಗಸ್ಟ್.1ರಿಂದ 3ರವರೆಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024 ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ 6ಕ್ಕೂ ಹೆಚ್ಚು ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಅಂತ ತಿಳಿಸಿದೆ.
ಇನ್ನೂ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳಿಂದ ಪ್ರದರ್ಶನ ನಡೆಯಲಿದೆ ಅಂತ ಹೇಳಿದೆ.
ಈ ಸಮ್ಮೇಳನದ ಘೋಷವಾಕ್ಯ ಸುಸ್ಥಿರತೆಗಾಗಿ ನ್ಯಾನೋ ತಂತ್ರಜ್ಞಾನ, ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಎಂದು ಅಂತ ತಿಳಿಸಿದೆ.
ಆಗಸ್ಟ್ 1 ರಿಂದ 3ರ ವರೆಗೆ ಮೂರು ದಿನಗಳ ಕಾಲ 13ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ – 2024 ನಡೆಯಲಿದೆ. ಸುಸ್ಥಿರತೆಗಾಗಿ ನ್ಯಾನೊ ತಂತ್ರಜ್ಞಾನ; ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಎಂಬುದು ಈ ಸಮಾವೇಶದ ಘೋಷವಾಕ್ಯವಾಗಿದೆ.#BangloreIndiaNano2024@CMofKarnataka @siddaramaiah @NsBoseraju pic.twitter.com/GXinjAVy1p
— DIPR Karnataka (@KarnatakaVarthe) July 3, 2024