ಬೆಂಗಳೂರು: ನಗರದಲ್ಲಿ ಏಕಾಂತದಲ್ಲಿದ್ದಂತ ಪ್ರೇಮಿಗಳಿಗೆ ಯುವಕರು ಕಿರುಕುಳ ನೀಡಿರುವಂತ ಘಟನೆ ನಡೆದಿದೆ. ರೊಚ್ಚಿಗೆದ್ದಂತ ಪ್ರೇಮಿಯಿಂದ ಯುವಕರಿಬ್ಬರಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿರುವಂತ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದರು. ಇಲ್ಲಿಗೆ ತೆರಳಿದಂತ ಯುವಕರಿಬ್ಬರು ಕಿರಿಕ್ ತೆಗೆದಿದ್ದಾರೆ. ಅವರನ್ನು ಪ್ರಶ್ನಿಸಿ, ಜಗಳ ಮಾಡಿದ್ದಾರೆ.
ಯುವಕರು ಹಾಗೂ ಪ್ರೇಮಿಯ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ತಾರಕಕ್ಕೇರಿ, ಕೈಕೈ ಮಿಲಾಯಿಸಿಕೊಂಡಿದ್ದಾರೆ. ಅಲ್ಲದೇ ಸಿಟ್ಟಿಗೆದ್ದಂತ ಪ್ರೇಮಿಯೊಬ್ಬ ಯುವಕರಿಬ್ಬರಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿರುವಂತ ಘಟನೆ ನಡೆದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್: 1,500 ಹೆಚ್ಚುವರಿ ‘KSRTC ಬಸ್’ ವ್ಯವಸ್ಥೆ | KSRTC Bus
BREAKING: ನಾನಾಗಲೀ, ನನ್ನ ಕುಟುಂಬದವರಾಗಲೀ, ಸರ್ಕಾರದಿಂದ ಒಂದೂ ನಿವೇಶನ ಪಡೆದಿಲ್ಲ: ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ