ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಬಹುಮಹಡಿ ಖಾಸಗಿ ಆ ಅಪಾರ್ಟ್ಮೆಂಟ್ ನ 7ನೇ ಮಹಡಿಯಿಂದ ಆಯತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಗಡೆ ನಗರ ಮುಖ್ಯರಸ್ತೆಯ ಕೆ ನಾರಾಯಣಪುರದ ಕ್ರಿಸಾಂತಮ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ವೈಟ್ ಫೀಲ್ಡ್ ನ ಗಾಂಧಿಪುರ ನಿವಾಸಿ ಕೃಷ್ಣ(43) ಮೃತಪಟ್ಟ ಕಾರ್ಮಿಕ.
ಕೃಷ್ಣ ಅವರು 20 ವರ್ಷಗಳಿಂದ ಪೇಟಿಂಗ್ ಹಾಗೂ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಹೆಗಡೆ ನಗರದ ಮುಖ್ಯ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ 6 ಹಾಗೂ 7ನೇ ಮಹಡಿಯಲ್ಲಿ ಮಂಗಳವಾರ ಸಿಮೆಂಟ್ ಕೆಲಸ ಮಾಡುತ್ತಿದ್ದರು. ಆಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಘಟನೆ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.