ಬೆಂಗಳೂರು: ನಗರದಲ್ಲಿರುವಂತ ಪೇಯಿಂಗ್ ಗೆಸ್ಟ್ ಅಂದ್ರೆ ಪಿಜೆಗಳಲ್ಲಿ ಯಾವುದಾದ್ರೂ ಅಹಿತಕರ ಘಟನೆ ನಡೆದ್ರೆ ಅದಕ್ಕೆ ಮಾಲೀಕರೆ ಹೊಣೆ ಮಾಡಲಾಗುತ್ತದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಎಕ್ಸ್ ಮಾಡಿರುವಂತ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಅವರು, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 34(ಡಿ) ಜೊತೆಗೆ ಕಲಂ 70ರ ಅನ್ವಯ ಪಿಜಿಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವಂತ ಪೇಯಿಂಗ್ ಗೆಸ್ಟ್ ಸುರಕ್ಷತಾ ಕ್ರಮದಲ್ಲಿ ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ ಪಡೆಯಬೇಕು. ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆದು, ರಕ್ತ ಸಂಬಂಧಿಕರ ವಿವರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ತಂತ್ರಜ್ಞಾನದ ಮೂಲಕ ಗಣಕೀಕರಿಸಿ, ದಾಖಲಿಸಬೇಕು ಎಂದಿದ್ದಾರೆ.
ಇನ್ನೂ ಭೇಟಿ ನೀಡಲು ಬರೋ ಸಂಬಂಧಿಕರು, ಸಾರ್ವಜನಿಕರು ಸೇರಿದಂತೆ ಎಲ್ಲರ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡು ಇರಬೇಕು ಅಂತ ಹೇಳಿದ್ದಾರೆ.
ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಪಿಜೆಗಳಲ್ಲಿ ಸುರಕ್ಷತೆಯ ದೃಷ್ಠಿಯಿಂದ ಅಳವಡಿಸಬೇಕು. ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು ಎಂದಿದ್ದಾರೆ.
ಒಂದು ವೇಳಎ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಾವುದಾದ್ರೂ ಅಹಿತಕರ ಘಟನೆ ಸಂಭವಿಸಿದ್ದೇ ಆದಲ್ಲಿ ಅದಕ್ಕೆ ಸಂಬಂಧಪಟ್ಟ ಪಿಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರಾಗುತ್ತರೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.