ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಮಾಡಲಾಗುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ರೈಲು ಸಂಖ್ಯೆ 56519/56520 ಕೆಎಸ್ಆರ್ ಬೆಂಗಳೂರು – ಹೊಸಪೇಟೆ – ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷದ ನಿಲುಗಡೆಯನ್ನು ಕಲ್ಪಿಸಲು ನಿರ್ಧರಿಸಿದೆ. ಈ ಸೌಲಭ್ಯವು ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಗೆ ಅಂದರೆ 2025ರ ಏಪ್ರಿಲ್ 18 ರಿಂದ ಜುಲೈ 17 ರವರೆಗೆ ಲಭ್ಯವಿರುತ್ತದೆ. ಈ ರೈಲುಗಳ ಆಗಮನ/ನಿರ್ಗಮನ ಸಮಯವು ಈ ಕೆಳಗಿನಂತಿರುತ್ತದೆ:
ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು – ಹೊಸಪೇಟೆ ದೈನಂದಿನ ಪ್ಯಾಸೆಂಜರ್ ರೈಲು ಹೊಳಲ್ಕೆರೆಗೆ ಬೆಳಿಗ್ಗೆ 09:57 ಗಂಟೆಗೆ ಆಗಮಿಸಿ 09:58 ಗಂಟೆಗೆ ನಿರ್ಗಮಿಸಲಿದೆ. ನಂತರ ಅಮೃತಾಪುರಕ್ಕೆ ಬೆಳಿಗ್ಗೆ 10:30 ಗಂಟೆಗೆ ಆಗಮಿಸಿ 10:31 ಗಂಟೆಗೆ ನಿರ್ಗಮಿಸಲಿದೆ.
ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 56520 ಹೊಸಪೇಟೆ – ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಅಮೃತಾಪುರಕ್ಕೆ ಸಂಜೆ 04:45 ಗಂಟೆಗೆ ಆಗಮಿಸಿ 04:46 ಗಂಟೆಗೆ ನಿರ್ಗಮಿಸಲಿದೆ. ನಂತರ ಹೊಳಲ್ಕೆರೆಗೆ ಸಂಜೆ 05:22 ಗಂಟೆಗೆ ಆಗಮಿಸಿ 05:23 ಗಂಟೆಗೆ ನಿರ್ಗಮಿಸಲಿದೆ.
ಪ್ರಯಾಣಿಕರು ಈ ತಾತ್ಕಾಲಿಕ ನಿಲುಗಡೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಅಂತ ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಇಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ: ಸಚಿವ ರಾಮಲಿಂಗಾರೆಡ್ಡಿ
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!