ಬೆಂಗಳೂರು: ನಗರದಲ್ಲಿ ಬೇಸಿಗೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಂತ ಜನತೆಗೆ ಇಂದು ಮಳೆರಾಯನ ಆಗಮನದ ಮೂಲಕ ತಂಪೆರೆದಂತೆ ಆಗಿದೆ. ನಗರದ ಹಲವೆಡೆ ಮಳೆರಾಯ ಆರ್ಭಟಿಸಿದ್ದಾನೆ.
ಬೆಂಗಳೂರು ನಗರದ ವಸಂತಪುರ, ವಿಜಯನಗರ, ಕುಮಾರಸ್ವಾಮಿ ಲೇಔಟ್, ಕಲ್ಯಾಣ ನಗರ, ವೈಟ್ ಫೀಲ್ಡ್, ಕೆಆರ್ ಪುರಂ ಸೇರಿದಂತೆ ವಿವಿಧ ಕಡೆಯಲ್ಲಿ ಮಳೆಯಾಗುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಸುರಿದಂತೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಬೆಂಗಳೂರಿನ ಪೂರ್ವ ವಲಯ ಹಾಗೂ ನಗರದ ದಕ್ಷಿಣ ಭಾಗದಲ್ಲಿ ಹಲವೆಡೆ ಮಿಂಚು, ಗುಡುಗು ಸಹಿತ ಮಳೆ ಸುರಿಯುತ್ತಿದೆ. ಈ ಮೂಲಕ ಕಳೆದ ಮೂರರಿಂದ ನಾಲ್ಕು ತಿಂಗಳ ಬಳಿಕ ಬೆಂಗಳೂರಲ್ಲಿ ಮಳೆಯಾಗಿ ತಂಪೆರೆದಂತೆ ಆಗಿದೆ.
BREAKING: ರಾಜ್ಯದಲ್ಲಿ ಬಿರು ಬಿಸಿಲಿನ ತಾಪಕ್ಕೆ ಮತ್ತೊಂದು ಬಲಿ | Heat Weather
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ