ಬೆಂಗಳೂರು: ಇಂದಿನಿಂದ ಜನವರಿ.25ರವರೆಗೆ ಬೆಂಗಳೂರು ಹಬ್ಬ ನಡೆಯಲಿದೆ. ಇಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಕನ್ನಡ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೈಗಾರಿಕಾ ವಲಯ ಹಾಗೂ ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜನವರಿ 16 ರಿಂದ 25ರ ವರೆಗೆ ʼಬೆಂಗಳೂರು ಹಬ್ಬʼವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಹಬ್ಬ-2026ರಲ್ಲಿ ಸಂಗೀತ ಹಾಗೂ ವೈವಿಧ್ಯಮಯ ಕಲೆಗಳ ಪ್ರದರ್ಶನ, ಸ್ತಬ್ದ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, ಮಹಿಳೆಯರ ಪೂರ್ಣ ಕುಂಭ, ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಒಳಗೊಂಡ ಮೆರವಣಿಗೆ ನಡೆಯಲಿದೆ.
ವಿಧಾನಸೌಧ, ಕಬ್ಬನ್ ಪಾರ್ಕ್ ಒಳಭಾಗದಿಂದ ಕೇಂದ್ರ ಗ್ರಂಥಾಲಯ, ಟೆನ್ನಿಸ್ ಮೈದಾನ, ವಿಕ್ಟೋರಿಯಾ ಪ್ರತಿಮೆ, ಅನಿಲ್ ಕುಂಬ್ಳೆ ವೃತ್ತ, ಮಹಾತ್ಮ ಗಾಂಧಿ ರಸ್ತೆ, ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣದ ರಂಗೋಲಿ ಕಲಾ ಕೇಂದ್ರದ ಮೂಲಕ ಮೆರವಣಿಗೆ ಸಾಗಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ, ಕೈಗಾರಿಕಾ ವಲಯ ಹಾಗೂ ವಿವಿಧ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿನಾಂಕ 16-01-2026ರ ಇಂದಿನಿಂದ ದಿನಾಂಕ 25-01-2026ರವರೆಗೆ ಬೆಂಗಳೂರು ಹಬ್ಬ-2026 ನಡೆಯಲಿದೆ.
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ: ಬೆಂಗಳೂರಲ್ಲಿ ಬಿಜೆಪಿ ವಿಜಯೋತ್ಸವ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








