ಬೆಂಗಳೂರು: ನಗರದಲ್ಲಿ ಅಪ್ಪ-ಮಗನಿಂದಲೇ ಬರೋಬ್ಬರಿ 93 ಮೊಬೈಲ್ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿರುವಂತ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ತಂದೆ-ಮಗ ಸೇರಿದಂತೆ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಮಹದೇವಪುರ ಪೊಲೀಸರಿಂದ ಮೊಬೈಲ್ ಕಳ್ಳತನ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30 ಲಕ್ಷ ಮೌಲ್ಯದ 93 ಮೊಬೈಲ್ ಪೋನ್ ಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳು ಫಾರೂಕ್, ಅವರ ಪುತ್ರ ಸಲ್ಮಾನ್ ಹಾಗೂ ಸ್ನೇಹಿತ ಸಾಜಿದ್ ಎಂಬುವರಾಗಿದ್ದಾರೆ. ಮಹದೇವಪುರ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವ ಹಾಗೂ ರಸ್ತೆಯಲ್ಲಿ ಹೋಗುವವರನ್ನೇ ಟಾರ್ಗೆಟ್ ಮಾಡಿ ಅವರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು.
ಅಂದಹಾಗೇ ಸ್ನೇಹಿತ ಸಾಜಿದ್ ಜೊತೆ ಸೇರಿ ಸನ್ಮಾನ್ ಕದಿಯುತ್ತಿದ್ದನು. ಕದ್ದ ಪೋನ್ ಗಳನ್ನು ತಂದೆ ಫಾರೂಖ್ ಗೆ ನೀಡಲಾಗುತ್ತಿತ್ತು. ಅವುಗಳನ್ನು ಫಾರೂಕ್ ಮಾರಾಟ ಮಾಡುತ್ತಿದ್ದರು. ಇದೀಗ ಮಹದೇವಪುರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂದಿಸಿ, ಜೈಲಿಗಟ್ಟಿದ್ದಾರೆ.
ದಾವಣಗೆರೆಯಲ್ಲಿ ಬಾಯ್ಲರ್ ಡ್ರಮ್ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು