ಬೆಂಗಳೂರು: ನಗರದಲ್ಲಿ ಇಂದು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಅದೇ ವೃದ್ಧೆಯೊಬ್ಬರನ್ನು ತುಂಡು ತುಂಡಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿ, ಡ್ರಮಿನ್ನಲ್ಲಿ ತುಂಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿರೋದಾಗಿದೆ.
ಬೆಂಗಳೂರಿನ ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 70 ವರ್ಷದ ವೃದ್ಧೆಯೊಬ್ಬರನ್ನು ತುಂಡು ತುಂಡಾಗಿ ಕತ್ತರಿಸಿ, ನಿರ್ಜನ ಪ್ರದೇಶದಲ್ಲಿನ ಡ್ರಮ್ ಒಂದರಲ್ಲಿ ತುಂಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿರೋ ಘಟನೆ ಬೆಳಕಿಗೆ ಬಂದಿದೆ.
ಖಾಲಿ ಜಾಗದಲ್ಲಿ ಡ್ರಮ್ ನಲ್ಲಿ ಮೃತ ದೇಹ ಇಟ್ಟು ಹಂತಕರು ಪರಾರಿಯಾಗಿರೋದಾಗಿ ತಿಳಿದು ಬಂದಿದೆ. ದುರ್ವಾಸನೆಯನ್ನು ಗಮನಿಸಿದಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ, ಸ್ಥಳಕ್ಕೆ ಕೆ ಆರ್ ಪುಂ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಅಲ್ಲದೇ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಅಂದಹಾಗೇ 2-3 ದಿನಗಳ ಹಿಂದೆ ವೃದ್ಧೆಯನ್ನು ಕೊಲೆಗೈದು, ಶವವನ್ನು ಕೆ ಆರ್ ಪುಂರ ನ ನಿಸರ್ಗ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಇಟ್ಟು ಹೋಗಲಾಗಿದೆ. ಈ ಬಗ್ಗೆ ತನಿಖೆಯಿಂದ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
BREAKING: ಹರ್ಯಾಣ ಐಎನ್ಎಲ್ಡಿ ಮುಖ್ಯಸ್ಥ ‘ನಫೆ ಸಿಂಗ್ ರಾಠಿ’ ಗುಂಡಿಟ್ಟು ಹತ್ಯೆ | MLA Nafe Singh Rathee
ಉತ್ತರ ಪ್ರದೇಶದ ‘ಪಟಾಕಿ ಕಾರ್ಖಾನೆ’ಯಲ್ಲಿ ಭೀಕರ ಸ್ಪೋಟ: ‘7 ಮಂದಿ’ ದುರ್ಮರಣ, ಹಲವರಿಗೆ ಗಾಯ