ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ಬಳಿಯ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಲಿಂಡರ್ ಸ್ಪೋಟ ಘಟನೆ ನಡೆದಿತ್ತು. ಈ ದುರಂತಕ್ಕೆ ರಾತ್ರಿಯೆಲ್ಲಾ ಗ್ಯಾಸ್ ಲೀಕ್ ಆಗಿರೋದೇ ಕಾರಣ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಈ ಕುರಿತಂತೆ ಆಡುಗೋಡಿ ಪೊಲೀಸರಿಂದ ತನಿಖೆ ನಡೆಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಮನೆಯಲ್ಲಿ ರಾತ್ರಿಯೆಲ್ಲಾ ಗ್ಯಾಸ್ ಸೋರಿಕೆಯಾಗಿದ್ದು, ಬೆಳಗ್ಗೆ ಮಗು ಟಿವಿ ಆನ್ ಮಾಡಿದಂತ ಸಂದರ್ಭದಲ್ಲಿ ಸ್ಪೋಟಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ.
ಆಗಸ್ಟ್.15ರಂದು ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗೂಢ ಸ್ಪೋಟ ಘಟನೆ ನಡೆದಿತ್ತು. ತನಿಖೆ ನಡೆಸಿದಂತ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದಾಗಿ ತಿಳಿದು ಬಂದಿತ್ತು. ಈ ದುರಂತದಲ್ಲಿ ಅಂದೇ ಓರ್ವ ಬಾಲಕ ಸಾವನ್ನಪ್ಪಿದ್ದನು. ನಿನ್ನೆ ಬಾಲಕನ ತಾಯಿ, ಸಹೋದರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.