ಬೆಂಗಳೂರು: ನಗರದಲ್ಲಿ ಅನೇಕರು ಇಂದು ರಾತ್ರಿ ಒಂದು ದಿನ ಹೊಸ ವರ್ಷಾಚರಣೆಯ ಕಾರಣದಿಂದ ಹಲವೆಡೆ ಪಾರ್ಟಿ ಆಯೋಜಿಸಲಾಗಿದೆ. ಹೀಗೆ ಪಾರ್ಟಿ ಆಯೋಜಿಸಿರೋರಿಗೆ ಬಿಗ್ ಶಾಕ್ ಎನ್ನುವಂತೆ ಇನ್ನೂ ಅನೇಕರಿಗೆ ಒಂದು ದಿನದ ಮಟ್ಟಿಗೆ ಮಧ್ಯದಂಗಡಿ ತೆರೆದು ಎಣ್ಣೆ ಮಾರಾಟಕ್ಕೆ ಲೈಸೆನ್ಸ್ ದೊರೆತಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಹಲವೆಡೆ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜಿಸಲಾಗಿದೆ. ಈ ಪಾರ್ಟಿಯಲ್ಲಿ ಮಧ್ಯ ಸರಬರಾಜು ಮಾಡುವುದಾಗಿಯೂ ಆಯೋಜಕರು ಟಿಕೆಟ್ ಮಾರಾಟ ಮಾಡಿದ್ದಾರೆ. ಹೊಸ ವರ್ಷಾಚರಣೆಯ ಪಾರ್ಟಿಗಾಗಿ ಈಗಾಗಲೇ ಹಲವರು ಆಯೋಜಿಸಿರುವಂತ ಕಾರ್ಯಕ್ರಮದ ಟಿಕೆಟ್ ಸೋಲ್ಡ್ ಔಟ್ ಆಗಿದ್ದಾವೆ. ಪಾರ್ಟಿಗೆ ತೆರಳೋದಕ್ಕೂ ಕೆಲವರು ಹೊರಟು ಸಿದ್ಧರಾಗಿದ್ದಾರೆ.
ಹೀಗೆ ಪಾರ್ಟಿಗೆ ಹೊರಟವರಿಗೆ ನಿರಾಸೆ, ಶಾಕ್ ಎನ್ನುವಂತೆ ಒಂದು ದಿನದ ಮಟ್ಟಿಗೆ ಸಿಎಸ್ ತೆರೆದು, ಮದ್ಯ ಮಾರಾಟಕ್ಕೆ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದ ಅನೇಕ ಪಾರ್ಟಿ ಆಯೋಜಕರಿಗೆ ಅನುಮತಿ ದೊರೆತಿಲ್ಲ. ಹೀಗಾಗಿ ಮದ್ಯ ಮಾರಾಟದ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಜೊತೆಗೆ ಪಾರ್ಟಿ ಆಯೋಜಕರಿಗೆ ಒಂದು ತಲೆ ಬಿಸಿ ಆದರೇ, ಟಿಕೆಟ್ ಖರೀದಿಸಿದವರಿಗೆ ಮತ್ತೊಂದು ಶಾಕ್ ನೀಡಿದಂತೆ ಆಗಿದೆ.
BIG NEWS: ರಾಜ್ಯ ಸರ್ಕಾರದಿಂದ ‘ಆಸ್ಪತ್ರೆ ಒಳ ಹಾಗೂ ಹೊರ ಆವರಣ’ದಲ್ಲಿ ‘ಬೀದಿ ನಾಯಿ’ಗಳ ನಿಯಂತ್ರಣಕ್ಕೆ ಈ ಮಹತ್ವದ ಆದೇಶ
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪೋಸ್ಟರ್ ಆಂದೋಲನ: ಹಲವು ಬಿಜೆಪಿ ನಾಯಕರ ಬಂಧನ