ಬೆಂಗಳೂರು: ನಗರದ ಜಯದೇವ ಆಸ್ಪತ್ರೆಯ ಶೌಚಾಲಯದಲ್ಲಿ ಮೊಬೈಲ್ ಇರಿಸಿ, ಮಹಿಳೆಯರ ಅರೆನಗ್ನ ವೀಡಿಯೋಗಳನ್ನು ಚಿತ್ರಿಸಿಕೊಳ್ಳುತ್ತಿದ್ದಂತ ಗುತ್ತಿಗೆ ನೌಕರನನ್ನು ಅಮಾನತುಗೊಳಿಸಿ, ಜಯದೇವ ಹೃದ್ರೋಗ ಸಂಸ್ಥೆ ಆದೇಶಿಸಿದೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯ ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು ಮಹಿಳೆಯರ ಖಾಸಗಿ ವಿಡಿಯೋವನ್ನು ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ಮಹಿಳಾ ಸಿಬ್ಬಂದಿಗಳೇ ರೆಡ್ ಹ್ಯಾಂಡ್ ಹಿಡಿದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಘಟನೆಗೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಆಸ್ಪತ್ರೆಯ ನಿರ್ದೇಶಕರಿಗೆ ಸೂಚಿಸಿದ್ದರು.
ಆರೋಪಿ ಯಲ್ಲಾಲಿಂಗ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ದೂರು ದಾಖಲಾದ ಬಳಿಕ ಸಂಸ್ಥೆಯ ಪೋಷ್ ಸಮಿತಿ ಎದುರು ಅವರನ್ನು ವಿಚಾರಣೆಗೆ ಒಳಪಡಿಸಿ, ಅಮಾನತು ಮಾಡಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಆರೋಪಿಯನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
GOOD NEWS: ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್: ರಾಜ್ಯಾಧ್ಯಂತ ‘ಇ-ಶ್ರಮ್ ಆದ್ಯತಾ ಪಡಿತರ ಚೀಟಿ’ ವಿತರಣೆ ಆರಂಭ
ರಾಜ್ಯದಲ್ಲಿ ‘ಮಾನಸಿಕ ಆರೋಗ್ಯ’ಕ್ಕಾಗಿ ‘ಟೆಲಿ ಮನಸ್ ಸಹಾಯವಾಣಿ’ ಆರಂಭ: ಯಾರು ಕರೆ ಮಾಡಬಹುದು.?