ಬೆಂಗಳೂರು: ಜನನಿಬಿಡ ರಸ್ತೆಯಲ್ಲಿ ಮಹೀಂದ್ರಾ ಥಾರ್ ಕಾರಿನಡ ಡ್ರೈವರ್ ಸೀಟಿನಲ್ಲಿ ಮಗುವೊಂದು ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರ ತೊಡೆಯ ಮೇಲೆ ಕುಳಿತು ಮಗು ಎಸ್ ಯುವಿಯನ್ನು ಓಡಿಸುತ್ತಿತ್ತು.
ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಬಳಿ ನಡೆದ ಗಂಭೀರ ಸಂಚಾರ ಉಲ್ಲಂಘನೆಯನ್ನು ಎತ್ತಿ ತೋರಿಸುವಾಗ ಪತ್ರಕರ್ತರೊಬ್ಬರು ಈ ಕ್ಲಿಪ್ ಅನ್ನು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದೊಂದಿಗೆ ವಾಹನದ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಅವರು ಸಂಚಾರ ಪೊಲೀಸರು ಮತ್ತು ಇತರ ಸಂಬಂಧಿತ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.