ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕಫೆಯಲ್ಲಿ ಉಂಟಾದಂತ ನಿಗೂಢ ಸ್ಪೋಟಕ ಪ್ರಕರಣಕ್ಕೆ ಕಾರಣ ಸಿಲಿಂಡರ್ ಸ್ಪೋಟ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಂಗ್ ನಿಂದ ಸ್ಪೋಟಕ ಸಂಭವಿಸಿದೆ ಎಂಬುದಾಗಿ ಕಫೆ ಸಹ ಸಂಸ್ಥಾಪಕಿ ದಿವ್ಯಾ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಮೇಶ್ವರಂ ಕಫೆಯ ಒಳಗೆ ಯಾವುದೇ ಸ್ಪೋಟ ಸಂಭವಿಸಿಲ್ಲ. ಯಾವುದೇ ಸಿಲಿಂಡರ್ ಅಥವಾ ವಿದ್ಯುತ್ ಅವಘಡದಿಂದಲೂ ಸ್ಪೋಟಕ ಸಂಭವಿಸಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಕಫೆಯಲ್ಲಿ ಸಂಭವಿಸಿದಂತ ಸ್ಪೋಟಕ್ಕೆ ಹೊರಗಿನಿಂದ ತಂದಿದ್ದ ಬ್ಯಾಗ್ ನಿಂದ ಸ್ಪೋಟವೇ ಕಾರಣ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಪೋಟವಾಗಿದೆ. ಈ ಸ್ಪೋಟಕದಲ್ಲಿ ನಾಲ್ವರು ಗ್ರಾಹಕರು, ಮೂವರು ಸಿಬ್ಬಂದಿ ಸೇರಿ 7 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಕಫೆ ಚೆನ್ನಾಗಿ ನಡೆಯುತ್ತಿತ್ತು. ದೇಶಾದ್ಯಂತವೂ ವಿಸ್ತರಿಸೋ ಯೋಚನೆಯಿತ್ತು. ಈ ಕಾರಣದಿಂದ ದ್ವೇಷದಿಂದ ಈ ಸ್ಪೋಟವನ್ನು ನಡೆಸಲಾಗಿದೆ. ಕಫೆಯ ಪ್ಲೇಟ್ ಗಳನ್ನು ಇಡುವ ಸ್ಥಳದಲ್ಲಿ ಸ್ಪೋಟವಾಗಿದೆ. ಒಂದು ಬ್ಯಾಗ್ ತಂದಿಟ್ಟ ನಂತ್ರ ಮತ್ತೊಂದು ಬ್ಯಾಗ್ ತಂದಾಗ ಭಾರೀ ಸ್ಪೋಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Bangalore Blast Case: ಬೆಂಗಳೂರಿನ ರಾಮೇಶ್ವರ ಕಫೆ ಸ್ಪೋಟಕ ಪ್ರಕರಣ: ಓರ್ವ ಗಾಯಾಳು ಸ್ಥಿತಿ ಗಂಭೀರ
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme