ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ಇಂದು ನಿಗೂಢ ಸ್ಪೋಟವೊಂದು ಸಂಭವಿಸಿತ್ತು. ಈ ಸ್ಪೋಟ ಸಂಭವಿಸಿರೋದು ಸಿಲಿಂಡರ್ ಬ್ಲಾಸ್ಟ್ ನಿಂದ ಅಲ್ಲ. ಬದಲಾಗಿ ಸ್ಥಳದಲ್ಲಿದ್ದಂತ ಬ್ಯಾಗ್ ನಲ್ಲಿ ಇದ್ದ ತುಂಡುಗಳಿಂದ ಎಂಬುದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟವೊಂದು ಸಂಭವಿಸಿತ್ತು. ಈ ಸ್ಪೋಟದಲ್ಲಿ ಮಹಿಳೆಯೊಬ್ಬರು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಈ ಘಟನೆ ಕುರಿತಂತೆ ಪ್ರತ್ಯಕ್ಷ ದರ್ಶಿ ಶಬರೀಶ್ ಎಂಬುವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಿಗೂಢ ಸ್ಪೋಟಕ್ಕೆ ಹೊರಗಡೆಯಿಂದ ತಂದಿರುವಂತ ವಸ್ತುವೇ ಕಾರಣ. ಸ್ಪೋಟಕ ಸ್ಥಳದಲ್ಲಿ ಟೈಲ್ಸ್ ಕೂಡ ಪುಡಿ ಪುಡಿಯಾಗಿದೆ. ಕಫೆ ಸಿಬ್ಬಂದಿ ಗ್ರಾಹಕರಿಗೆ ಯಾವುದೇ ನೆರವು ನೀಡಲಿಲ್ಲ. ನಾವೇ ನೆರವಾಗಿ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ನೆರವಾದೆವು ಎಂದಿದ್ದಾರೆ.
ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟಕ್ಕೆ ಗ್ಯಾಸ್ ಸಿಲಿಂಡರ್ ಕಾರಣವಲ್ಲ. ಬದಲಾಗಿ ಬ್ಯಾಗ್ ನಲ್ಲಿದ್ದಂತ ತುಂಡುಗಳು ಎಂಬುದಾಗಿದೆ. ಸ್ಪೋಟಕದ ನಂತ್ರ ಸಿಬ್ಬಂದಿ, ನಾಲ್ಕು ಗ್ರಾಹಕು ಗಾಯಗೊಂಡಿದ್ದರು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ