ಬೆಂಗಳೂರು: ಅಂಗಡಿ ಮುಂಗಟ್ಟುಗಳ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಿ ನಾಮಫಲಕ ಹಾಕೋದು ಕಡ್ಡಾಯಗೊಳಿಸಲಾಗಿದೆ. ಇದರ ನಡುವೆ ರಾಜ್ಯ ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದಂತ ಬೆಂಗಳೂರಿನ ಮಾಲ್ ಆಫ್ ಏಷ್ಯಾದ ಕೆಲ ಮಳಿಗೆಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಅಲ್ಲದೇ ಲೈಸೆನ್ಸ್ ರದ್ದುಗೊಳಿಸಿ ಬಿಗ್ ಶಾಕ್ ನೀಡಿದೆ.

ಬೆಂಗಳೂರಿನ ಮಾಲ್ ಆಫ್ ಏಷ್ಟಾದಲ್ಲಿದ್ದಂತ ಕೆಲ ಮಳಿಗೆಗಳು ನಾಮಫಲಕದಲ್ಲಿ ಕನ್ನಡ ಕಡ್ಡಾಯದ ನಿಯಮವನ್ನು ಪಾಲಿಸಿರಲಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ನೋಟಿಸ್ ಕೂಡ ನೀಡಿ, ಶೇ.60ರಷ್ಟು ನಾಮಫಲಕದಲ್ಲಿ ಕನ್ನಡ ಬಳಕೆಗೆ ಸೂಚಿಸಲಾಗಿತ್ತು.

ಬಿಬಿಎಂಪಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರೂ ಮಾಲ್ ಆಫ್ ಏಷ್ಯಾದ ಕೆಲವು ಮಳಿಗೆ ಉದ್ದಿಮೆದಾರರು ಮಾತ್ರ ಎಚ್ಚೆತ್ತುಕೊಂಡು ಬೋರ್ಡ್ ಬದಲಾಯಿಸೋ ಗೋಜಿಗೆ ಹೋಗಿರಲಿಲ್ಲ.

ಈ ಹಿನ್ನಲೆಯಲ್ಲಿ ಇಂದು ದಿಢೀರ್ ದಾಳಿ ಮಾಡಿದಂತ ಬಿಬಿಎಂಪಿಯ ಅಧಿಕಾರಿಗಳು ಶೇ.60ರಷ್ಟು ಕನ್ನಡ ನಾಮಫಲಕ ಹಾಕದಂತ ಮಾಲ್ ಆಫ್ ಏಷ್ಯಾದ ಕೆಲ ಮಳಿಗೆಗಳಿಗೆ ಬೀಗ ಜಡಿದಿದ್ದಾರೆ. ಅಲ್ಲದೇ ಟ್ರೇಡ್ ಲೈಸೆನ್ಸ್ ರದ್ದು ಮಾಡಿದ ನೋಟಿಸ್ ನೀಡಿದ್ದಾರೆ.

ಅಂದಹಾಗೇ ಈ ಹಿಂದೆ ಸಾಕಷ್ಟು ಕಾಲಾವಕಾಶವನ್ನು ಬಿಬಿಎಂಪಿಯಿಂದ ಮಾಲ್ ಆಫ್ ಏಷ್ಯಾದ ಉದ್ದಿಮೆದಾರರಿಗೆ ನೀಡಲಾಗಿತ್ತು. ಆದರೇ ಕಾಲಾವಧಿಯ ಗಡುವು ಮುಗಿದ್ರೂ ನಾಮಫಲಕಗಳನ್ನು ಬದಲಾವಣೆ ಮಾಡಲಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಅಂಗಡಿಗಳಿಗೆ ಬೀಗ ಹಾಕಿ, ಲೈಸೆನ್ಸ್ ರದ್ದುಗೊಳಿಸಿ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

BREAKING: ಶಿವಮೊಗ್ಗದಲ್ಲಿ ‘ಬಿ.ವೈ ವಿಜಯೇಂದ್ರ’ ವಿರುದ್ಧವೇ ‘ಲೋಕಸಭಾ ಚುನಾವಣೆ’ಗೆ ಸ್ಪರ್ಧೆ: ‘ಕೆ.ಎಸ್ ಈಶ್ವರಪ್ಪ’ ಘೋಷಣೆ

‘ಮಾರುವೇಷ’ದಲ್ಲಿ ರೋಗಿಯಂತೆ ‘ಸರ್ಕಾರಿ ಆಸ್ಪತ್ರೆ’ಗೆ ತೆರಳಿ ಅವ್ಯವಸ್ಥೆ ಬಹಿರಂಗ ಪಡಿಸಿದ ‘IAS ಅಧಿಕಾರಿ’: ವೀಡಿಯೋ ವೈರಲ್

Share.
Exit mobile version